ವಿದ್ಯಾರ್ಜನೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು – ಬಿ.ನಾಗನಗೌಡ


ಸಂಜೆವಾಣಿ ವಾರ್ತೆ
ಸಂಡೂರು: ಜೂ: 8:  ಸಂಡೂರು:ಮಕ್ಕಳ ವಿದ್ಯಾರ್ಜನೆಯಲ್ಲಿ ಪೋಷಕರ ಪಾತ್ರ ಮಹತ್ವವಾದದ್ದು ಮೊಬೈಲ್‍ನಿಂದ ಮಕ್ಕಳನ್ನು ದೂರವಿಟ್ಟು ಸಾಮಾಜಿಕವಾಗಿ ಬೆಳೆಸುವ ಅವಶ್ಯಕತೆ ಇದೆ ಎಂದು ಬಿಕೆಜಿ ಸಮೂಹ ಸಂಸ್ಥೆಯ ನಿರ್ದೇಶಕರಾದ ಬಿ.ನಾಗನಗೌಡ ತಿಳಿಸಿದರು.
ಅವರು ತಾಲೂಕಿನ ಕೃಷ್ಣಾನಗರ ಗ್ರಾಮದಲ್ಲಿಯ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿ ಅತಿಯಾದ ಸೌಲಭ್ಯವನ್ನು ನೀಡದೆ ಉತ್ತಮ ವಿದ್ಯೆಮತ್ತು ಸಂಸ್ಕರವನ್ನು ನೀಡುವಜವಬ್ದಾರಿ ಪೋಷಕರ ಮೇಲಿದೆ ಎಂದು ಬಿ.ಕೆ.ಜಿ ಸಮೂಹಸಂಸ್ಥೆಯ ಮಕ್ಕಳಿಗೆ ವಿಶೇಷವಾದ ಅಕ್ಷರಾಭ್ಯಾಸ ಪೂಜಾ ಕಾರ್ಯಕ್ರಮವನ್ನು ಸಂಸ್ಥೆಯ ಸ್ಥಾಪಕರಾದ ಬಿ.ಕಮಲಮ್ಮ ಚಾಲನೆ ನೀಡಿದರು, ಅವರು ಮಾತನಾಡಿ ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಶಿಕ್ಷಣ ನೀಡಿದಲ್ಲಿ ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳು ಉಳಿಯುತ್ತವೆ ಅದ್ದರಿಂದ ಶಾಲೆಯವರು ಮಕ್ಕಳಿಗೆ ಪ್ರಾರಂಭ ಈ ಅಕ್ಷರಾಭ್ಯಾಸ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಯುವಂತೆ ಮಾಡಿದ್ದಾರೆ ಇದರ ಮೂಲಕ ನಮ್ಮಲ್ಲಿಯ ಶಿಕ್ಷಣದ ಮಹತ್ವ ಉನ್ನತಕ್ಕೆ ಹೋಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ನಡೆಸಿದರು, ಅಲ್ಲದೆ ಪ್ರಾಚಾರ್ಯರಾದ ಕೆ.ವಿಮೋಹನ್‍ರಾವ್, ಅಡ್ಮಿನ್‍ನಾಗರಾಜು ಹಾಜರಿದ್ದರು. ಕಾರ್ಯಕ್ರಮದಲ್ಲಿ ಗಣಹೋಮ ಸರಸ್ವತಿಹೋಮ, ಅಕ್ಷರಾಭ್ಯಾ¸ ಮತ್ತು ವಿದ್ಯಾರಂಬ ಜರುಗಿತುಕಾರ್ಯಕ್ರಮವನ್ನು ಶಿಕ್ಷಕಿಯರಾದ ನೀತುಜೈನ್ ರೂಪಿಸಿದರು, ಪಲ್ಲವಿಸಿಂಗ್ ಸ್ವಾಗತಿಸಿದರು, ಶಹನಾಜ್ ಪ್ರಾಸ್ಥಾವಿಕಭಾಷಣಮಾಡಿದರು ಮತ್ತು ನಂದಿನಿ ವಂದಿಸಿದರು, ಎಲಾ ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.