ವಿದ್ಯಾರ್ಜನೆಗೆ ವಿನಯ ಶೀಲತೆ ಅಡಿಪಾಯ. ವಿದ್ಯೆಯ ಜೊತೆಯಲ್ಲಿ ವಿನಯವು ಬೆಳೆಯಬೇಕು: ಡಾ. ಚನ್ನವೀರ ಶಿವಾಚಾರ್ಯರು

ಬಸವಕಲ್ಯಾಣ:ನ.13:ವಿದ್ಯಾರ್ಜನೆಗೆ ವಿನಯ ಶೀಲತೆ ಅಡಿಪಾಯ. ವಿದ್ಯೆಯ ಜೊತೆಯಲ್ಲಿ ವಿನಯವು ಬೆಳೆಯಬೇಕು. ವಿದ್ಯಾರ್ಥಿಗಳ ಆಂತರ್ಯದಲ್ಲಿ ಚಿಂತನ ಮಂಥನಗಳ ಪ್ರವಾಹ ನಿರಂತರವಾಗಿ ಹರಿಯುತ್ತಿದ್ದರೆ ಅದ್ಭುತ ಪ್ರತಿಭೆಗಳ ಸೃಷ್ಟಿ ಸಾಧ್ಯ ಎಂದು ಹಾರಕೂಡ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ 2010ನೇ ಸಾಲಿನ 3ನೇ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ನಿಮಿತ್ಯ, ಹಾರಕೂಡ ಶ್ರೀಗಳ ಗುರುವಂದನೆ ಹಾಗೂ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು ತನ್ನ ಶಕ್ತಿಯನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿ ಪ್ರತಿ ವಿದ್ಯಾರ್ಥಿಯಲ್ಲಿಯೂ ಇರುತ್ತದೆ.
ಆಂತರ್ಯದಲ್ಲಿ ಹುಡುಗಿದ ಅದ್ಭುತ ಶಕ್ತಿ ಪ್ರಕಟಗೊಳ್ಳಬೇಕಾದರೆ ಸತತ ಮತ್ತು ಸರಿಯಾದ ಪರಿಶ್ರಮ ಬತ್ತದ ಇಚ್ಛಾಶಕ್ತಿ ಹೊಂದಿರಬೇಕು. ವಸತಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು, ಸಂಸ್ಕಾರದ ಕೊರತೆಯಿಂದ ಬಳಲುವುದಿಲ್ಲ.
ವೈಯಕ್ತಿಕ ಸಾಧನೆಯಿಂದ ಸಮಾಜದ ಒಳಗಾಗಿ, ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಹಣೆಯಾಗುವಂತೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯಕುಮಾರ ನಾಗವಾರ, ನಾಗನಾಥ ಸರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ 3ನೇ ಬ್ಯಾಚ್ ವಿದ್ಯಾರ್ಥಿಗಳಾದ ನಾಗೇಶ ಇನಾಮತೆ, ಸಾಯಿಶಂಕರ ಕಾಳಗಿ, ಆಫ್ರೀನ್ ಖಾಸಿಂಸಾಬ್, ಮಹಾದೇವ ದೇಗಾಂವ, ಶರಣು ಧಮದೆ, ಶಿವಾಜಿ ಸಿರಗಾಪೂರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಶರಣಯ್ಯ ಕಂಬಳಿಮಠ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಭಿಮಶಾ ಜೋಜನ್, ಸುಭಾಷ ರೆಡ್ಡಿ, ಅಲ್ಲಮಪ್ರಭು ಹೀರೆಮಠ, ತಾನಾಜಿ ಸರ್, ಕಮಲಕರ ಹತ್ತರಗಾ, ದಿಲೀಪ ಕಾಲೋಜಿ, ಪಂಡಿತ ಬಿರಾದಾರ, ವಿಠ್ಠಲ ಹೂಗಾರ ಭಾಗವಹಿಸಿದರು.
ಚನ್ನವೀರ ದೇವಣಗಾಂವ, ವೀರೇಶ ಠಮಕೆ, ಪ್ರವೀಣರೆಡ್ಡಿ, ಚನ್ನವೀರ ಮಠಪತಿ, ಆಕಾಶ ಸೈದಾಪುರೆ, ನವೀನ ಕಾಳಗಿ, ಚನ್ನವೀರ ಅಂಬಲಗಿ, ರಮೇಶ ಪೀರಜೆ, ಜಗದೀಶ ಗುಂಡುರ, ಬಸವರಾಜ ಪೂಜಾರಿ, ನಾಗೇಶ ಮಠಪತಿ, ಅಂಬರೀಷ ದೇಗಾಂವ ಚೇತನ ಟೋಣಪೆ ಸೇರಿದಂತೆ ಶಾಲೆಯ 3ನೇ ಬ್ಯಾಚ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ಅಶ್ವಿನಿ ಅಂಬರೀಶ ಬಿರಾದಾರ ನಿರೂಪಿಸಿದರು.
ಸುಧಾರಾಣಿ ಹಾರಕೂಡೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿನಾಥ ಹಿರೇಮಠ, ಪರಮೇಶ್ವರ ಹೊಳಕುಂದೆ, ಶಿವಶರಣಯ್ಯ ಕಂಬಳಿಮಠ, ಚನ್ನಬಸಯ್ಶಾ ದೇವಣಗಾಂವ, ಅಪ್ಪಣ್ಣ ಜನವಾಡ, ದಿಲೀಪ ಕಲೋಜಿ, ಮಹಾದೇವ ದೇಗಾಂವ ಉಪಸ್ಥಿತರಿದ್ದರು. ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2010ನೇ ಸಾಲಿನ 3ನೇ ಬ್ಯಾಚ್ ವಿದ್ಯಾರ್ಥಿಗಳು ಹಾರಕೂಡ ಶ್ರೀಗಳ 586ನೇ ತುಲಾಭಾರ ನೇರವೇರಿಸಿ ಆಶಿರ್ವಾದ ಪಡೆದರು.