ವಿದ್ಯಾರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು, ಅ.೩೧-ಹಲವು ವರ್ಷಗಳಿಂದ ವರ್ಗಾವಣೆ, ಮಾನದಂಡಗಳನ್ನು ಉಲ್ಲಂಘಿಸಿ ಅನೇಕ ಹುದ್ದೆಯಲ್ಲಿ ಬೀಡುಬಿಟ್ಟಿರುವ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಸರ್ಕಾರಿ ನರ್ಸಿಂಗ್ ಶಾಲೆ ಪ್ರಾಂಶುಪಾಲೆ ವಿದ್ಯಾರಾಜು ಸಾಲಿಯಾನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.
ನಗರದಲ್ಲಿಂದು ಜನತಾ ಪಕ್ಷದ ರಾಜ್ಯಾ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ದೂರು ಸಲ್ಲಿಕೆ ಮಾಡಿದ್ದು, ರಾಜ್ಯ ಸರ್ಕಾರದ ನಿಯಾಮವಳಿ ಉಲಂಘಿಸಿ ಏಕಕಾಲದಲ್ಲಿ ಹೆಚ್ಚಿನ ಹುದ್ದೆಗಳನ್ನು ಅಲಂಕರಿಸಿದ ವಿದ್ಯಾರಾಜು ಸಾಲಿಯಾನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿದ್ಯಾರಾಜು ಸಾಲಿಯಾನ ೨೦೦೭ ರಲ್ಲಿ ಶುಶ್ರೊಶಕರಾಗಿ ನೇಮಕಗೊಂಡು, ೨೦೧೧ರಲ್ಲಿ ಪ್ರಾಂಶುಪಾಲರಾಗಿ ನಂತರ ಏಕಕಾಲದಲ್ಲಿ ಇಲ್ಲಿಯವರೆಗೆ, ಹೆಚ್‌ಡಿಓ ಮಾತ್ರವಲ್ಲದೆ, ಪ್ರಸುತ್ತ ಸ್ಕೂಲ್ ಆಫ್ ನಸಿಂಗ್‌ಗೆ ಪ್ರಾಂಶುಪಾಲರಾಗಿ, ಕಾಲೇಜು ಆಫ್ ನಸಿಂಗ್, ಪ್ಯಾರಾಮೆಡಿಕಲ್ ನ ಪ್ರಾಂಶುಪಾಲರಾಗಿ, ಬಿಎಲ್‌ಸಿಎಚ್ ಆಸ್ಪತ್ರೆ ಉಸ್ತುವಾರಿ, ಪ್ಯಾರಾಮೆಡಿಕಲ್ ಕಮಿಟಿ ಸದಸ್ಯರಾಗಿ ಅಚ್ಚರಿಯ ರೀತಿಯಲ್ಲಿ ಇ? ಹುದ್ದೆಗಳಲ್ಲಿ ವಿದ್ಯಾರಾಜು ಸಾಲಿಯಾನ ಓರ್ವರೇ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ೧೨ ವರ್ಷಗಳಿಂದ ಒಂದೇ ಹುದ್ದೆ ಇತರ ಸಂಸ್ಥೆ ಹುದ್ದೆಗಳನ್ನು ನಿರ್ವಹಿಸಿದ್ದರೆ, ಸರ್ಕಾರದ ನಿಯಮಾವಳಿ ಪ್ರಕಾರ ಒಬ್ಬ ವ್ಯಕ್ತಿಯು ಒಂದೇ ಹಾಗೂ ಮೂರು ವರ್ಷಗಳಿಗೊಮ್ಮೆ ವರ್ಗಾವಣೆಯಾಗಬೇಕು, ಅದರೆ ಇವರು ೧೨ ವರ್ಷಗಳ ಹೆಚ್ಚು ಒಂದೇ ಹುದ್ದೆಯಲ್ಲಿ ಇರುವ ವ್ಯಕ್ತಿ ಅನೇಕ ಹುದ್ದೆಗಳನ್ನು ಹೊಂದಿರುವುದು ಸರಿಯಲ್ಲ.ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆ ನಡೆಸುವಂತೆ ನಾಗೇಶ್ ಒತ್ತಾಯಿಸಿದ್ದಾರೆ.
ಇನ್ನೂ, ವಿದ್ಯಾರಾಜ ಸಾಲಿಯಾನ ಶುಶೂಷಕರ ಪರೀಕ್ಷಾ ಮಂಡಳಿಯ ಕಾರ್ಯದರ್ಶಿಯನ್ನಾಗಿ ಪ್ರಸ್ತುತ ನಿರ್ವಹಿಸುವಂತೆ ಜ್ಞಾಪನ ಪತ್ರ ನೀಡಲಾಗಿದೆ. ಆದರೆ, ೨೦೨೨ರಲ್ಲಿ ನಸಿಂಗ್ ಮತ್ತು ಕಾಲೇಜು ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿದ್ದು, ಹೊರರಾಜ್ಯಗಳಿಂದ ನಕಲಿ ಅಭ್ಯರ್ಥಿಗಳು ಸೃಷ್ಟಿಸಿಕೊಂಡ ಐಡಿಕಾರ್ಡ್‌ನೊಂದಿಗೆ ಅಕ್ರಮವಾಗಿ ಪರೀಕ್ಷೆಗಳನ್ನು ಬರೆದಿದ್ದು ಅನೇಕ ಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ವರದಿಯಾಗಿದ್ದರೂ, ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
ವಾರ್ಷಿಕ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸುವ ಪರೀಕ್ಷೆಗಳಲ್ಲಿ ಬೇನಾಮಿ ವ್ಯಕ್ತಿಗಳು ಪರೀಕ್ಷೆಗೆ ಹಾಜರಾಗುವುದು, ಅಂಕಪಟ್ಟಿಗಳ ತಿದ್ದುವಿಕೆ, ಮೌಲ್ಯಮಾಪನ, ಪರೀಕ್ಷಾ ಉಸ್ತುವಾರಿ ಇತ್ಯಾದಿ ಎಲ್ಲ ಹಂತಗಳಲ್ಲೂ ಈಕೆಯ ಹಸ್ತಕ್ಷೇಪವಿರುವುದು ಕಂಡುಬಂದಿದ್ದು, ಇದರಿಂದಾಗಿ ಪ್ರತಿಭಾವಂತ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯವನ್ನೇ ಬುಡಮೇಲು ಮಾಡಿದಂತಾಗಿದೆ. ಈಕೆಯು ಸೇರಿದಂತೆ ಅನೇಕ ಸಹೋದ್ಯೋಗಿಗಳು ಖಾಸಗಿ ನಸಿಂಗ್ ಹೋಂಗಳಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿಯ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಸೆಳೆಯುವ ಸಂಚಿನಲ್ಲಿ ಪಾಲ್ಗೊಂಡು ವೈಯಕ್ತಿಕ ಹಾಗೂ ಖಾಸಗಿ ಶಾಲೆಗಳ ಆದಾಯ ಗಳಿಕೆಯಲ್ಲಿ ಭಾಗಿಯಾಗಿರುತ್ತಾರೆ ಎಂದು ನಾಗೇಶ್ ದೂರಿದರು.