ವಿದ್ಯಾರಣ್ಯ ಪ್ರೌಢ ಶಾಲೆಗೆ 98.46 ಪ್ರತಿಶತ ಫಲಿತಾಂಶ

ಬೀದರ :ಮೇ.10:ಜಿಲ್ಲೆಯಲ್ಲಿಯೇ ಕನ್ನಡ ಮಾಧ್ಯಮದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯು ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 98.46% ಫಲಿತಾಂಶ ಪಡೆದಿರುತ್ತದೆ. ಒಟ್ಟು 130 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 08 ವಿದ್ಯಾರ್ಥಿಗಳು 90%ಕ್ಕಿಂತ ಮೇಲ್ಪಟ್ಟು ಫಲಿತಾಂಶ ಪಡೆದಿರುತ್ತಾರೆ.
ಅಲ್ಲದೆ ಕನ್ನಡ ವಿಷಯದಲ್ಲಿ 05, ಇಂಗ್ಲೀಷ್ ವಿಷಯದಲ್ಲಿ 01 ಮತ್ತು ಹಿಂದಿ ವಿಷಯದಲ್ಲಿ 08 ವಿದ್ಯಾರ್ಥಿಗಳು ವಿಷಯವಾರು ಶತಪ್ರತಿಶತ ಫಲಿತಾಂಶ ಪಡೆದಿರುತ್ತಾರೆ.
ಗಣೇಶ ದತ್ತಾತ್ರಿ 610 ಅಂಕಗಳು ಪಡೆದಿದ್ದು, ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ವೈಶಾಲಿ ಅಪ್ಪಾರಾವÀ 602 ಅಂಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾಳೆ ಹಾಗೂ ಸಮೃದ್ಧಿ ಬಾಲಾಜಿ 588 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.