ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಲು ಕರೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ನ.24: ತಾಲ್ಲೂಕಿನ ಅರಸೀಕೆರೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಹಾಗೂ ಮನೋರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸಕ್ಕೆ ದಾರಿಯಾಗುತ್ತದೆ ಎಂದು ಪ್ರಾಧ್ಯಾಪಕ ವೈ.ಡಿ ರಂಗನಾಥ್ ತಿಳಿಸಿದರು.
ಎಸ್.ಎಂ.ಸಿ.ಕೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಅಡಗಿರುವ ಹೊಸತನದ ಕಲಿಕೆಯ ವೃದ್ಧಿಗೆ ಸಹಕಾರಿಯಾಗಿದೆ.
ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮೊಬೈಲ್, ಸಿನಿಮಾ, ಟಿವಿಗೀಳಿಗೆ ಬೀಳದೆ ವೈಚಾರಿಕತೆ ಸಾರಿದ ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಓದುವುದರರಲ್ಲಿ ಸಕ್ರಿಯಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಜಿ.ಬಿ ಹಾವೇರಿ ಪ್ರಾಧ್ಯಾಪಕ ಆರ್.ಡಿ ಕೊಪ್ಪದ, ಪೂಜಾರ್ ದುರುಗೇಶ್, ಆರ್. ಕುಮಾರ್ ನಾಯ್ಕ, ಚಂದ್ರಪ್ಪ, ನಾಗರಾಜ್ ಇದ್ದರು.