ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.27: ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸೂರಿಬಾಬು ನೆಕ್ಕಂಟಿ ಅವರು, ತಮ್ಮ ಸಂಸ್ಥೆ ವತಿಯಿಂದ ನಮ್ಮ ವಿದ್ಯಾರ್ಥಿ ನಮ್ಮ ಜವಾಬ್ದಾರಿ ಎಂಬ ಯೋಜನೆ ಅಡಿಯಲ್ಲಿ 200 ಸ್ಮಾಟ್೯ ಆ್ಯಂಡ್ರಾಯಿಡ್ ಟಿವಿ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಉಚಿತವಾಗಿ ಟಿ.ವಿಗಳನ್ನು ನೀಡುತ್ತೀರುವುದು ಉತ್ತಮ ಕೆಲಸವಾಗಿದ್ದು, ಈ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದರು.
ನೆಕ್ಕಂಟಿ ಸೂರಿಬಾಬು ಮಾತನಾಡಿ, ಖಾಸಗಿ ಶಾಲೆಯಲ್ಲಿ ದೊರೆಯುವ ತಂತ್ರಜ್ಞಾನ ಶಿಕ್ಷಣ ಸರಕಾರಿ ಶಾಲಾ ಮಕ್ಕಳಿಗೂ ದೊರಕಿಸಿಕೊಡುವ ಯೋಜನೆ ರೂಪಿಸಿದ್ದು, ಎಲ್ಲ ಮಕ್ಕಳ ಆಧುನಿಕ ತಂತ್ರಜ್ಞಾನದ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಎನ್.ಆರ್. ಶ್ರೀನಿವಾಸ್ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ ಗೌಡ, ಸಣ್ಣ ರಾಮನಗೌಡರು, ಜೋಗದ ನಾರಾಯಣಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ಹತ್ತಿಮರದ ಶಿವಪ್ಪ ನಾಯಕ, ಗಡ್ಡಿ ಮುದುಕಪ್ಪ, ಟಿ.ದುರುಗಪ್ಪ , ಟಿ ಕಾಟಪ್ಪ, ಎನ್ ಸಿದ್ದಪ್ಪ ನಾಯಕ, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವಸದಸ್ಯರು, ಇರಕಲ್ ಗಡ, ಕಿನ್ನಾಳ, ವೆಂಕಟಗಿರಿ, ಉಡುಮಕಲ್, ಆರಾಳ, ವಡ್ಡರಹಟ್ಟಿ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
One attachment • Scanned by Gmail