
ದಾವಣಗೆರೆ.ಏ.೨೮: ರೋಟರಿ ಕ್ಲಬ್ ವಿದ್ಯಾನಗರ ರಜತ ಮಹೋತ್ಸವ ಸಂಭ್ರಮದಲ್ಲಿದ್ದು, ಈ ನಿಮಿತ್ತ ಮಹಿಳಾ ಮತ್ತು ಶಿಶುಗಳ ಆರೋಗ್ಯದ ಕುರಿತು ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಸಿ.ಕೆ. ಸಿದ್ದಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಛೇರ್ಮನ್ ಎಂ. ಎನ್. ಮಹೇಶ್ವರಪ್ಪ ಅಂತಾರಾಷ್ಟ್ರೀಯ ರೋಟರಿ ಫೌಂಡೇಶನ್ ಹಾಗೂ ಚಿತ್ರದುರ್ಗ, ಗುಲ್ಬರ್ಗ, ನಂದ್ಯಾಲ, ಹೈದರಾಬಾದ್, ರೋಟರಿ ಸಂಸ್ಥೆಗಳು ಈ ಪ್ರಾಜೆಕ್ಟ್ ಗೆ ಧನ ಸಹಾಯ ಮಾಡಿದ್ದು, ಅವರ ಬೆಂಬಲವನ್ನು ಕೂಡ ನೀಡಿದ್ದಾರೆ ಎಂದರು.ಈ ಪ್ರಾಜೆಕ್ಟ್ ಅಡಿಯಲ್ಲಿ ದಾವಣಗೆರೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯ ನವಜಾತ ಶಿಶು ವಿಭಾಗದಲ್ಲಿ ಅಗತ್ಯವಿರುವ ಸುಮಾರು ೨೮.೧೬ ಲಕ್ಷ ರೂಪಾಯಿಗಳ ಉಪಕರಣಗಳನ್ನು ಕೊಡುಗೆಯಾಗಿ ನೀಡಲಿದ್ದೇವೆ ಎಂದರು.ಉಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಮೇ.೧ರಂದು ಮಧ್ಯಾಹ್ನ ೧೨.೩೦ ಕ್ಕೆ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ರಾಜ್ಯಪಾಲ ವೊಮ್ಮಿನ ಸತೀಶ್ ಬಾಬು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಡಾ. ಎಲ್. ನಾಗರಾಜ್, ಉದ್ಘಾಟಿಸಲಿದ್ದಾರೆ. ರೋಟರಿ ಅಧ್ಯಕ್ಷ ಸಿ.ಕೆ. ಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಕೆ. ಶ್ರೀರಾಮ ಮೂರ್ತಿ, ಬಿ. ಚಿನ್ನಪ್ಪ ರೆಡ್ಡಿ, ಕೆ. ಮಧು ಪ್ರಸಾದ್, ಎಸ್. ಪವಾರ್, ಎಂ.ಕೆ. ರವೀಂದ್ರ, ಡಾ. ವಿ.ಎಲ್. ಜಯಸಿಂಹ, ಎನ್.ಬಿ. ಮೃತ್ಯುಂಜಯಪ್ಪ ಉಪಸ್ಥಿತರಿರುವರು ಎಂದರು.ಅಂದು ಮಧ್ಯಾಹ್ನ ೨ಗಂಟೆಗೆ ವಿದ್ಯಾನಗರ ಎಂ.ಬಿ. ರೋಟರಿ ಭವನದಲ್ಲಿ ಪಾಲ್ ಪಿ.ಹ್ಯಾರಿಸ್ ಬೆಸ್ಟ್ ಇನ್ಯಾಗುರೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸಿ.ಕೆ.ಸಿದ್ದಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗವರ್ನರ್ ವೊಮ್ಮಿನ ಸತೀಶ್ ಬಾಬು ಆಗಮಿಸಲಿದ್ದಾರೆ. ಬಾಗ್ ಸಿಂಗ್ ನನ್ನು, ಆರ್.ಎಸ್. ನಾರಾಯಣ ಸ್ವಾಮಿ, ಎನ್.ಬಿ. ಮೃತ್ಯುಂಜಯಪ್ಪ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ಹೆಚ್.ಎಂ. ಚಂದ್ರಾಚಾರ್, ಎನ್.ಬಿ. ಮೃತ್ಯುಂಜಯ, ಜಿ.ಬಿ. ಸಿದ್ದಪ್ಪ, ರವಿಕುಮಾರ್ ಉಪಸ್ಥಿತರಿದ್ದರು.