ವಿದ್ಯಾನಗರ ಬಡಾವಣೆಯಲ್ಲಿ ವಿಜಯದಶಮಿ ಆಚರಣೆ

ಬೀದರ:ಅ.27: ಸೋಮವಾರ ಸಂಜೆ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ರಾಮಮಂದಿರ ಅವರಣದಲ್ಲಿ ಜೈ ಶ್ರೀರಾಮ ಚಾರಿಟೇಬಲ್ ಏಜ್ಯುಕೇಶನ್ ಸೋಸೈಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಒಂಬತ್ತು ದಿವಸ ದೇವಿಯ ಪ್ರತಿಷ್ಟಾಪನೆ ಹಾಗೂ ವಿಜಯದಶಮಿ ಆಚರಿಸಲಾಯಿತು. ಈ ವರ್ಷ ವಿಶೇಷವಾಗಿ ಬನ್ನಿಮರದ ಪೂಜೆ ನೆರವೇರಿತು.

ಜೈಶ್ರೀಮಾ ಚಾರಿಟೇಬಲ್ ಏಜ್ಯುಕೇಶನ್ ಸೂಸೈಟಿ ಅಧ್ಯಕ್ಷ ಚಂದ್ರಶೇಖರ ಪೋಲಿಸ್ ಅವರು ಬನ್ನಿಮರಕ್ಕೆ ಪೂಜೆ ನೆರವೇರಿಸಿದರು.ರಾಮಮಂದಿರದ ಅರ್ಚಕ ಮಹೆಶ ತಿವಾರಿ ವಿಶೇಷ ಪೂಜೆ ನೆರವೇರಿಸಿದರು.

ಸೂಸೈಟಿ ಉಪಾಧ್ಯಕ್ಷ ಶ್ರೀಕಾಂತ ಪಾಟೀಲ ಈ ಸಂದರ್ಭದಲ್ಲಿ ಮಾತನಾಡಿ, ದಸರಾ ಆಚರಣೆಯು ನಮ್ಮೆಲ್ಲರಲ್ಲಿ ಭಕ್ತ ಭಾವ ಮೂಡಿಸುವುದರ ಜೊತೆಗೆ ನಮ್ಮಲ್ಲಿ ಏಕತೆ, ಭಾತೃತ್ವ, ಸನಾತನ ಸಂಸ್ಕøತಿ ಪುನರೂಜ್ಜೀವನಗೊಳಿಸುತ್ತದೆ. ಇದರಿಂದ ನಮ್ಮ ದೇಶಿಯ ಪರ್ಯಂಪರೆ ಭಾವಿ ಪಿಳಿಗೆಗೆ ಪರಿಚಯಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಳೆದ ಆರೇಳು ತಿಂಗಳಿನಿಂದ ಈ ವಿಶೇಷ ದಸರಾ ಆಚರಣೆಗೆ ತಯ್ಯಾರಿ ನಡೆಸಿತು ಎಂದು ವಿವರಿಸಿದರು.

ಇದಕ್ಕೂ ಮುನ್ನ ಬಡಾವಣೆಯ ಪ್ರಮುಖರು ಬನ್ನಿ ಮರವನ್ನು ಸಂಪ್ರದಾಯದಂತೆ ಬಾಜಾ, ಬಜೆಂತ್ರಿಯೊಂದಿಗೆ ಬಡಾವಣೆಯ ಭವಾನಿ ಮಂದಿರದಿಂದ ಮಾರ್ಖಂಡೇಶ್ವರ ದೇವಸ್ಥಾನ, ಅಲ್ಲಿಂದ ರಾಮ ಮಂದಿರ ವರೆಗೆ ಮೆರವಣಿಗೆ ಜರುಗಿತು. ಕಲ್ಯಾಣರಾವ ಬಿರಾದಾರ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಸೂಸೈಟಿ ಪದಾಧಿಕಾರಿಗಳಾದ ರಮೇಶ ಶರಣಪ್ಪ, ಮೋಹನ ನರಸಿಂಗರಾವ, ಮಹೇಶ ಇಂಜಿನಿಯರ್, ಪ್ರಭಾಕರ ಜಟ್ಲಾ, ನರೇಂದ್ರ ರಾಜಗೊಂಡೇಕರ್, ಸೂರ್ಯಕಾಂತ ಕೋಟೆ, ಸಂಜೀವ ರೆಡ್ಡಿ, ಪ್ರಭು ಆಲೂರೆ, ರಾಜಶೇಖರ ಗದ್ದೆ, ರಾಚಪ್ಪ ಪಾಟೀಲ ಸೇರಿದಂತೆ ಬಡಾವಣೆಯ ಪ್ರಮುಖರು, ಮಹಿಳೆಉರು, ಮಕ್ಕಳು ಉಪಸ್ಥಿತರಿದ್ದರು.