ವಿದ್ಯಾನಗರದ ಉದ್ಯಾನವನ ಸ್ವಚ್ಛತೆಗಾಗಿ ಮಹಾನಗರ ಪಾಲಿಕೆಗೆ ಮನವಿ

ಕಲಬುರಗಿ,ಆ.6:ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಾರ್ಡ ನಂ. 45ರಲ್ಲಿ ಬರುವ ವಿದ್ಯಾನಗರ ಕಾಲೋನಿ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶ್ರಾವಣ ಮಾಸ ನಿಮಿತ್ಯ ಒಂದು ತಿಂಗಳ ಪಯ್ರ್ಯಂತ ನಡೆಯುವ ಪುರಾಣ-ಪ್ರವಚನ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ವಿದ್ಯಾನಗರ ಕಾಲೋನಿ ಬಡಾವಣೆ ಸುತ್ತ-ಮುತ್ತಲು ಇರುವ ಬಡಾವಣೆಯ ನೂರಾರು ಭಕ್ತರು ನಮ್ಮ ಸಮುದಾಯ ಭವನಕ್ಕೆ ಬಂದು ಹೋಗುವ ಹಿನ್ನೆಲೆಯಲ್ಲಿ ಸಮುದಾಯ ಭವನದ ಸುತ್ತ-ಮುತ್ತಲಿನಲ್ಲಿರುವ ರಸ್ತೆಯ ಬದಿಯಲ್ಲಿ ಹಾಗು ಉಧ್ಯಾನವನದ ಆವರಣದಲ್ಲಿ ಅಡ್ಡಾ-ತಿಡ್ಡಿ ಬೆಳೆದ ಕಸ ಕಂಟಿ ಸ್ವಚ್ಚತೆಗೊಳಿಸಿ ಸಾರ್ವಜನಿಕರಿಗೆ ಒಳ್ಳೆಯ ವಾತಾವರಣ ಮಾಡಿಕೊಡಬೇಕೆಂದು ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.