ವಿದ್ಯಾನಗರದಲ್ಲಿನ ವಿಶ್ವಾರಾಧ್ಯರ ಪುರಾಣಕ್ಕೆ ತಂಡ ತಂಡವಾಗಿ ಬರುತ್ತಿರುವ ಭಕ್ತರ ದಂಡು

ಕಲಬುರಗಿ : ಸೆ.2:ವಿದ್ಯಾನಗರ ವಿಶ್ವಾರಾಧ್ಯರ ಪುರಾಣ ಕಾರ್ಯಕ್ರಮ ಕಲಬುರಗಿಯ ಸೇಡಂ ರಸ್ತೆ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ವಿದ್ಯಾನಗರ ವೆಲ್ಫರ್ ಸೊಸಾಯಿಟಿ ಪದಾಧಿಕಾರಿಗಳು ಅಲ್ಲಿನ ಬಡಾವಣೆ ನಾಗರಿಕರ ಸಹಕಾರದಿಂದ ವಿಜ್ರಂಬಣೆಯಿಂದ ಆರಂಭಿಸಿದ್ದಾರೆ. ಐನಾಪೂರದ ನಾಡಿನ ಹಿರಿಯ ಪುರಾಣಿಕರು, ವೈದಿಕ ಶಾಸ್ತ್ರಿಗಳಾದ ಪಂ. ವೇ|| ಮೂ|| ಮಲ್ಲಿಕಾರ್ಜುನ ಶಾಸ್ತ್ರಿ ಅವರಿಂದ ಪುರಾಣ ಶುರುವಾಗಿದ್ದು, ಜನಮನ ಸೆಳೆಯುತ್ತಿದೆ.

ಸಂಗೀತದ ರಸದೌತಣವೂ ಭಕ್ತರು ಸವಿಯುತ್ತಿದ್ದಾರೆ. ನಿತ್ಯ ಸಂಜೆ ಪುರಾಣ ಆಲಿಸಲು ನೂರಾರು ಜನರು ದೌಡಾಯಿಸಿ ಬರುತ್ತಿದ್ದಾರೆ. ವಿಶ್ವಾರಾಧ್ಯರ ಜೀವನ,ಲೀಲೆಗಳು, ಪವಾಡಗಳು ಕೇಳಿ ಜನರು ಪುಳುಕಿತಗೊಳ್ಳುತ್ತಿದ್ದಾರೆ. ಇದು ದಿನ ದಿನಕ್ಕೆ ಭಾರಿ ಪ್ರಮಾಣದಲ್ಲಿ ಸಾಗುತ್ತಿದೆ. ನಮ್ಮ, ನಿಮ್ಮ ನಡುವೆ 80 ವರ್ಷಗಳ ಹಿಂದೆ ಸುಮಾರು 70 ವರ್ಷಗಳ ಕಾಲ ಬಾಳಿ, ಬದುಕಿ ಮತ್ತು ಬದುಕಿನ ಉದ್ದಕ್ಕೂ ಬೇಡಿ ಬಂದವರ ಕಷ್ಟ, ಸುಖಗಳಿಗೆ ಸ್ಪಂಧಿಸಿದ್ದ ವಿಶ್ಚಾರಾಧ್ಯರು ಬಗ್ಗೆ ಜನರು ಕೂತುಹಲದಿಂದ ಪುರಾಣ ಕೇಳುತ್ತಿದ್ದಾರೆ. ತಿಂಗಳ ಕಾಲ ಪುರಾಣ ನಡೆಯಲಿದೆ. ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಒಡೆಯರಾದ ಪರಮ ಪೂಜ್ಯ ಡಾ.ಗಂಗಾಧರ ಸ್ವಾಮಿಗಳು ಈ ಪುರಾಣ ಮಂಗಲೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ವೀರಭದ್ರಯ್ಯ ಸ್ಥಾವರಮಠ ಅವರ ಸಂಗೀತ ಹಾಡುಗಾರಿಕೆ ಜನರನ್ನು ರಂಜಿಸುತ್ತಿದೆ. ವೆಲ್ಫೆರ್ ಸೊಸಾಯಿಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಖಜಾಂಚಿ ಗುರುಲಿಂಗಯ್ಯ ಮಠಪತಿ ಹಾಗೂ ಪದಾಧಿಕಾರಿಗಳಾದ ಬಸವಂತರಾವ ಜಾಬಶೆಟ್ಟಿ, ಮಲ್ಲಿಕಾರ್ಜುನ ನಾಗಶೆಟ್ಟಿ, ವಿಶ್ವನಾಥ ರಟಕಲ್, ನಾಗರಾಜ ಹೆಬ್ಬಾಳ, ಸುಭಾಷ ತಂಬಾಕೆ, ನಾಗಭೂಷಣ ಹಿಂದೊಡ್ಡಿ, ಶಾಂತಯ್ಯ ಬೀದಿಮನಿ, ಸುಭಾಷ ಮಂಠಾಳೆ ಪುರಾಣ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಎಂದು ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಸೊಸೈಟಿಯ ಸಂಕ್ಷಿಪ್ತ ಹಿನ್ನೆಲೆ : ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದ ಉದ್ಯಾನವನದಲ್ಲಿರುವ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್ ಫೆರ ಸೊಸೈಟಿ ವತಿಯಿಂದ ಇಲ್ಲಿಯವರೆಗೆ 17 ವರ್ಷಗಳಿಂದ ಪುರಾಣ ಪ್ರವಚನ ನಡೆಸಿಕೊಂಡು ಬರುತ್ತಿರುವ ಈ ವೇದಿಕೆಯಡಿಯಲ್ಲಿ ರಂಭಾಪೂರಿ ಜಗ್ದುರುಗಳು, ಹಾರಕೂಡಶ್ರೀ, ಜಿಡಗಾಶ್ರೀ, ಬೀದರಶ್ರೀ, ಸುಲಫಲಶ್ರೀ, ಕಡಕೋಳಶ್ರೀ, ಭರತನೂರಶ್ರೀ, ಟೆಂಗಳಿಶ್ರೀ, ಪಾಳಾಶ್ರೀ, ಚೌಡಾಪೂರಿಶ್ರೀ, ಸೊನ್ನದಶ್ರೀ, ಜೇರಟಗಿಶ್ರೀ, ಗೋಳಾಶ್ರೀ, ಹೊನ್ನಕಿರಣಗಿಶ್ರೀ, ಗದ್ದುಗೆಮಠದಶ್ರೀ, ಸುಗೂರಶ್ರೀ, ಮಾದನಹಿಪ್ಪರಗಾಶ್ರೀ, ಇಲಕಲ್ಲಶ್ರೀ, ಭಾಲ್ಕಿಶ್ರೀ, ಬಡದಾಳಶ್ರೀ, ಹುಲಸೂರಶ್ರೀ, ಪೂಜ್ಯ ಶರಣಬಸವಪ್ಪ ಅಪ್ಪಾ, ಲಿಂಗರಾಜ ಅಪ್ಪಾ, ಸಿನಿಯರ್ ಐಎಎಸ್ ಆಫೀಸರ ಶಾಲೀನಿ ರಜನೀಶ್, ಫೌಜಿಯಾತರ್ನುಮ, ದೂರದರ್ಶನ ನಿರ್ದೇಶಕರಾದ ಬಾನಂದೂರು ಕೆಂಪಯ್ಯ ಹೀಗೆ ಅನೇಕ ಪೂಜ್ಯರ, ಮಠಾಧೀಶರ, ಉನ್ನತ ಮಟ್ಟದ ಅಧಿಕಾರಿಗಳವರ ನೇತ್ರತ್ವದಲ್ಲಿ ವಿಜ್ರಂಬಣಯಿಂದ ಜರುಗಿದ ಪುರಾಣ ಪ್ರವಚನ ಈ ವರ್ಷ್ 18ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಪವಾಡ ಪುರುಷ ವಿಶ್ವರಾಧ್ಯರ ಪುರಾಣ ಹಮ್ಮಿಕೊಳ್ಳಲಾಗಿದೆ. ಎಂದು ವಿದ್ಯಾನಗರ ವೆಲ್ಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ವಿವರಣೆ ನೀಡಿದ್ದಾರೆ.