ವಿದ್ಯಾಗಿರಿ ಮಹಿಳಾ ಸಂಘದಿಂದ ಮಹಿಳಾ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.24:  ನಗರದ ವಿದ್ಯಾಗಿರಿ ಮಹಿಳಾ ಸಂಘದಿಂದ ನಗರದ ಖಾಸಗಿ ಹೊಟೆಲ್ ಸಭಾಂಗಣದಲ್ಲಿ ನಿನ್ನೆ ಸಂಜೆ  ಮಹಿಳಾ ದಿನಾಚರಣೆಯನ್ನು  ಹಮ್ಮಿಕೊಂಡಿದ್ದರು.
ಪ್ರೊಫೆಸರ್ ಸುಧಾ,  ಉಷಾರಾಣಿ, ಪವಿತ್ರ, ನೀಲಮ್ಮ,  ಮಂಜುಳಾ, ಯಶೋಧ, ಅನುರಾಧ, ರತ್ನ, ಶ್ರೀಲತಾ, ಸುಮಾ, ಲೀಲಾ, ಸುನೀತಾ, ಭವ್ಯ, ರೂಪ, ಸುಭದ್ರ ಸುಲೋಚನಾ ಮೊದಲಾದವರು   ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸುಧಾ ಅವರು ಮಾತನಾಡಿ, ಮಹಿಳೆಯರು ಸಬಲರಾಗಲು ವಿದ್ಯಾವಂತರಾಗಿ ಎಲ್ಲಾ ಕ್ಷೇತ್ರಗಳಲ್ಲಿ  ಮುಂದೆ ಬರಬೇಕು. ಸರ್ಕಾರದ ಸೇವೆಗಳನ್ನು ಉಪಯೋಗಿಸಿಕೊಂಡು ಪುರುಷರಿಗೆ ಸಮನಾಗಿ ದುಡಿದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
ಎಲ್ಲರೂ ಹಸಿರು ಸೀರೆಯನ್ನು ಉಟ್ಟುಏಕತೆಯನ್ನು ಪ್ರದರ್ಶಿಸಿದರು. ಮಕ್ಕಳಾದ ಸೌಮ್ಯ, ಮನುಶ್ರೀ, ಸುಷ್ಮಾ, ಪ್ರಿಯಾ, ಚಿರು, ಸೋಮು ನೃತ್ಯ ಪ್ರದರ್ಶಿಸಿದರು
ಉಷಾ ಸ್ವಾಗತಿಸಿದರು ಪವಿತ್ರ ನಿರೂಪಿಸಿದರು ಅನುರಾಧ ವಂದಿಸಿದರು ತೇಜಸ್ವಿನಿ ಅಂಶಿಕ ಪ್ರಾರ್ಥಿಸಿದರು.