ವಿದ್ಯಾಗಮ ಶಾಲಾ ಪ್ರಾರಂಭಕ್ಕೆ ಶಾಸಕರಿಂದ ಚಾಲನೆ

ಬಳ್ಳಾರಿ, ಜ.01: ಹೊಸ ವರ್ಷದ (6-9ನೇ ತರಗತಿ) ವಿದ್ಯಾಗಮ 2 ಹಾಗೂ 10 ನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಕೆ.ಪಿ.ಎಸ್.ಬಾಲಕೀಯರ ಶಾಲೆಯಲ್ಲಿ ಬಳ್ಳಾರಿ ನಗರದ ಶಾಸಕರಾದ ಜಿ.ಸೋಮಶೇಖರರೆಡ್ಡಿ ವಿದ್ಯುಕ್ತವಾಗಿ ಚಾಲನೆ ನೀಡಿ, ತಂದೆ ತಾಯಿ ಮತ್ತು ಗುರುಗಳ ಆಶೀರ್ವಾದ ಇದ್ದರೆ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಶುಭ ಕೋರಿದರು. ನಂತರ ಅಭಯ ಫೌಂಡೇಶನ್ ಅವರ ವತಿಯಿಂದ ಉಚಿತವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿದರು.
ಕೋವಿಡ್-19 ಕರೋನ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಬಿ.ಇ.ಓ ಟಿ.ಎಂ.ಸಿದ್ಧಲಿಂಗ ಮೂರ್ತಿ ಸೂಚನೆಗಳನ್ನು ನೀಡಿ, ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಉತ್ತಮವಾಗಿ ಅಂಕಗಳನ್ನು ಗಳಿಸಬೇಕು ಎಂದು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್, ಎ.ಎರ್ರಿಸ್ವಾಮಿ, ವೀರಶೇಖರರೆಡ್ಡಿ, ಮಲ್ಲನಗೌಡ, ಮೋತ್ಕರ್ ಶ್ರೀನಿವಾಸ್, ಇಸಿಓ ಗೂಳೆಪ್ಪ ಬೆಳೆಕಟ್ಟಿ, ಬಿ.ಆರ್.ಸಿ. ಮಲ್ಲಪ್ಪ, ಸಿಆರ್‍ಪಿ ಎರ್ರಿಸ್ವಾಮಿ, ಮಹಮ್ಮದ್, ಪ್ರೌಢಶಾಲೆಯ ಮುಖ್ಯಗುರುಗಳು ಕೆ.ಶಿವಣ್ಣ, ಕೆ.ಪಿ.ಎಸ್. ಪ್ರಾಚಾರ್ಯರಾದ ಮಹಾಲಿಂಗನಗೌಡರು ಉಪಸ್ಥಿತರಿದ್ದರು.