
ಅಥಣಿ : ಆ.22: ಮಾಜಿ ಉಪಮುಖ್ಯಮಂತ್ರಿ, ರೈತ ನಾಯಕ ಹಾಗೂ ಅಥಣಿಯ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರು ವಿದೇಶಗಳ ಪ್ರವಾಸ ಕೈಗೊಂಡಿದ್ದಾರೆ.
ಈ ವೇಳೆ ಅವರು ಅಮೇರಿಕಾ ದೇಶದಲ್ಲಿ ನೂತನ ತಾಂತ್ರಿಕತೆಯೊಂದಿಗೆ ಅಲ್ಲಿನ ರೈತರು ಕೈಗೊಂಡಿರುವ ಆಧುನಿಕ ಕೃಷಿ ಪದ್ಧತಿಯನ್ನು ವೀಕ್ಷಿಸಿ ವಾಷಿಂಗ್ಟನ್ ಡಿಸಿಯಿಂದ ಅಮೇರಿಕಾದ ನಯಾನಗರಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸಿ ಮಾರ್ಗ ಮಧ್ಯದಲ್ಲಿರುವ ರೈತರ ಕೃಷಿ ಜಮೀನುಗಳಿಗೆ, ಫಾರ್ಮ್ ಹೌಸ್ ಗಳಿಗೆ ಭೇಟಿ ನೀಡಿ ಅಲ್ಲಿನ ರೈತರು ಬೆಳೆದಿದ್ದ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ವೀಕ್ಷಿಸಿ ಕೃಷಿಯಲ್ಲಿ ಆರ್ಥಿಕ ಪ್ರಗತಿ ಹೊಂದಿರುವ ಅಮೆರಿಕಾದ ರೈತರೊಂದಿಗೆ ಕೃಷಿಯಲ್ಲಿ ಅವರು ಅನುಸರಿಸುತ್ತಿರುವ ವೈಜ್ಞಾನಿಕ ವ್ಯವಸಾಯದ ಕುರಿತು ಲಕ್ಷ್ಮಣ ಸವದಿ ಅವರು ಸಮಾಲೋಚನೆ ನಡೆಸಿದ್ದಾರೆ.