ವಿದೇಶ ಪ್ರವಾಸ,ತಲಕಾಯಿ ಮಾರೆಪ್ಪ ಸನ್ಮಾನ

ರಾಯಚೂರ,ಜು.೨೫- ನಗರದ ಪ್ರತಿಷ್ಠಿತ ನವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ಆರ್.ರೆಡ್ಡಿ ಅವರ ಸುಪುತ್ರ ಅಮೃತ ರೆಡ್ಡಿ ಅವರು ಇಂದು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಗೆ ತೆರಳುತ್ತಿರುವ ಕಾರಣ ಎಸ್.ಆರ್.ರೆಡ್ಡಿ ಬಳಗದ ಅಧ್ಯಕ್ಷರಾದ ತಲಕಾಯಿ ಮಾರೆಪ್ಪ ಅವರು ಶಾಲು ಹೊದಿಸಿ, ಆತ್ಮೀಯವಾಗಿ ಸನ್ಮಾನಿಸಿದರು.
ವಿದೇಶ ಪ್ರವಾಸಕ್ಕೆ ಶುಭ ಹಾರೈಸಿದರು.ಕಠಿಣ ಪರಿಶ್ರಮದಿಂದ ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡುವಂತೆ ಹಿಡಿದ ಗುರಿ ಮುಟ್ಟುವಂತೆ ಪ್ರಾರ್ಥನೆ ಮಾಡಿದರು.ನಿಮ್ಮ ಉನ್ನತ ಓದು ಭವಿಷ್ಯದ ಮಕ್ಕಳಿಗೆ ಸಿಗಲಿ ಎಂದು ಕೋರಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲೇ ನವೋದಯ ಶಿಕ್ಷಣ ಸಂಸ್ಥೆ ಹೆಸರುವಾಸಿ, .ಇಂತಹ ಪ್ರತಿಷ್ಢಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ಪುತ್ರ ಹೆಚ್ಚಿನ ಓದಿಗೆ ವಿದೇಶಕ್ಕೆ ಹೋಗುತ್ತಿರುವುದು ಸಂತೋಷ ತರುತ್ತದೆ.ಇವರ ಪ್ರವಾಸಕ್ಕೆ ಶುಭ ಕೋರಿ ಬಿಳ್ಕೋಡುಗೆ ಕೊಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಸಿದ್ದರಾಮ ಸ್ವಾಮಿ, ಜೆ.ವಿಶ್ವನಾಥ,ರವಿ ಗಿಣಗೇರ, ಆನಂದರೆಡ್ಡಿ, ಶಿವಜಾತಸ್ವಾಮಿ ಮತ್ತು ಅಪಾರ ಅಭಿಮಾನಿ ಬಳಗ ಶುಭ ಕೋರಿತು.