ವಿದೇಶಿ ಸಂಸ್ಕೃತಿಯ ಜೊತೆ ಭಾರತೀಯ ಸಂಸ್ಕøತಿಯ ತೌಲನಿಕ ಅಧ್ಯಯನ ಮುಖ್ಯ: ಡಾ. ಶ್ವೇತಾ ದೀಪ್ತಿ

ಕಲಬುರಗಿ:ಫೆ.3: ಭಾರತೀಯ ಸಂಸ್ಕೃತಿಯನ್ನು ವಿದೇಶಿ ಸಂಸ್ಕೃತಿಯಾಗಲಿ ಅಥವಾ ಬೇರೆ ಯಾವುದೇ ಸಂಸ್ಕೃತಿಯ ತೌಲನಿಕ ಅಧ್ಯಯನ ಮಾಡುವುದು ಬಹಳ ಮುಖ್ಯ ವಾಗಿದೆ ಎಂದು ನೇಪಾಳದ ಕಠ್ಮಂಡು ತ್ರಿಭುವನ್ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾದ ಡಾ. ಶ್ವೇತಾ ದೀಪ್ತಿ ಯವರೂ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಹಮ್ಮಿಕೊಂಡ ಒಂದು ದಿನದ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಆಶಯ ನುಡಿಗಳನ್ನು ಆಡಿದರು. ಕಾರ್ಯಕ್ರಮವನ್ನು ಪೆÇ್ರ.ಧನ್ಯಕುಮಾರ ಬಿರಾಜದಾರ ರಾಷ್ಟ್ರೀಯ ಮಹಾ ಮಂತ್ರಿಗಳು ಅಖಿಲ ಭಾರತೀಯ ಹಿಂದಿ ಮಹಾಸಭಾ ಹೊಸದಿಲ್ಲಿ ಇವರು ಉದ್ಘಾಟಿಸಿದರು.ಇಂದು ಭಾಷಾ ಸಂಸ್ಕೃತಿಯನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಚತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡು ಮಾತನಾಡುತ್ತಾ ಹಿಂದಿ ವಿಭಾಗದವರು ಆಯೋಜಿಸಿರುವ ಈ ಅಂತರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ ನಮ್ಮ ಮಹಾವಿದ್ಯಾಲಯದ ಇತಿಹಾಸದಲ್ಲಿ ಒಂದು ಹೊಸ ಸಾಧನೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಡಾ.ವೀಣಾ ಹೆಚ್ ,ಶ್ರೀಮತಿ ಉಮಾ ಆರ್, ಶ್ರಿಮತಿ ಸುಷ್ಮಾ ಕುಲಕರ್ಣಿ,ಶ್ರೀಮತಿ ಕವಿತಾ ಠಾಕುರ, ಡಾ.ಸವಿತಾ ತಿವಾರಿ,ಡಾ.ದೀಪಾ ರಾಗಾ,ಡಾ.ನೀತಾ ಬೋಸ್ಲೆ,ನಿವೃತ್ತ ಪ್ರಾಚಾರ್ಯರಾದ ಡಾ.ವಿಜಯಲಕ್ಚ್ಮಿ ಕೊಸಗಿ,ಆನಂದರಾಯ ಶೆರಿಕಾರ ಹಾಗೂನಿವೃತ್ತ ಪ್ರಾಧ್ಯಾಪಕರಾದ ಡಾ.ವಿಜಯಕುಮಾರ್ ಪರುತೆ ಹಾಗೂ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ವಿಚಾರಸಂಕಿರಣದ ಸಂಘಟಕರಾದ ಡಾ.ಪ್ರೇಮಚಂದ ಚವ್ಹಾಣ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು ,ಕುಮಾರಿ ಶೃತಿ ಕುಲಕರ್ಣಿ ಪ್ರಾರ್ಥಿಸಿದರು,ಡಾ.ವಿಲಾಸ ಸೊಲಂಕಿ ಕಾರ್ಯಕ್ರಮ ನಿರ್ವಹಿಸಿದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.