ವಿದೇಶಿ ಯುವತಿ ಜತೆ ಸಪ್ತಪದಿ ತುಳಿದ ಅನಂತರಾಜು

ಬಳ್ಳಾರಿ, ನ. ೨೫- ಇಂದು ಬೆಳಿಗ್ಗೆ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಹಂಪಿಯ ಮಾರ್ಗದರ್ಶಿಯೊಂದಿಗೆ ವಿದೇಶಿ ಯುವತಿ ವಿವಾಹವಾಗಿ ತಮ್ಮ ಬಾಳು ಹಂಚಿಕೊಳ್ಳಲು ಮುಂದಾಗಿದ ಘಟನೆ ನಡೆದಿದೆ. ಭಾರತೀಯ ಸಂಪ್ರದಾಯದಂತೆ ಮಾರ್ಗರ್ದಶಿ ಅನಂತರಾಜು ಜೊತೆ ವಿದೇಶಿ ಯುವತಿ ಕೆಮಿಲ್ ಸಪ್ತಪದಿ ತುಳಿದ್ದಾಳೆ. ಕಳೆದ ನಾಲೈದು ವರ್ಷಗಳಿಂದ ಪ್ರೇಮಾಂಕುರವಾಗಿತ್ತು. ಅನಂತರಾಜು ಹಂಪಿಯಲ್ಲಿ ಆಟೋ ಚಾಲಕನಾಗಿ, ಗೈಡ್ ಆಗಿ ಕೆಲಸ ಮಾಡುವ ಯುವಕ, ಕೆಮಿಲ್ ಬೆಲ್ಜಿಯಂನಲ್ಲಿ ಸಮಾಜ ಸೇವಕಿ.
ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬವು ಅನಂತರಾಜು ಅವರ ಸಹಾಯ ಪಡೆದಿತ್ತು, ಆ ವೇಳೆ ಅನಂತರಾಜು ಅವರ ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬಸ್ಥರು ಮನ ಸೋತಿದ್ದರು, ಮಾತ್ರವಲ್ಲ ಇದೇ ವೇಳೆ ಕೆಮಿಲ್ ಮತ್ತು ಅನಂತರಾಜು ನಡುವೆ ಪ್ರೀತಿ ಬೆಸೆಯಿತು. ಬೆಲ್ಡಿಯಂನ ಜೀಪ್ ಫಿಲಿಪ್ಪೆ ತೃತೀಯ ಪುತ್ರಿ ಆಗಿರುವ ಕೆಮಿಲ್ ಹಾಗೂ ಅನಂತರಾಜು ಮೂರು ವರ್ಷಗಳ ಹಿಂದೆಯೇ ಪ್ರೇಪ ವಿವಾಹ ಆಗಬೇಕಿತು, ಆದರೆ ಕೊರೋನಾ ಮಾಹಾಮಾರಿ ಅಡ್ಡಿಯಾಯ್ತು.
ಮಗಳ ಮದುವೆಯನ್ನು ಬೆಲ್ಲಿಯಂನಲ್ಲೇ ಅದ್ದೂರಿಯಾಗಿ ಮಾಡಬೇಕು ಎಂದು ಕೆಮಿಲ್ ಪೋಷಕರು ಅಂದುಕೊಂಡಿದ್ದರು. ಆದರೆ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆ ಆಗಬೇಕೆಂದು ಅನಂತರಾಜು ಹಾಗೂ ಕುಟುಂಬದವರು ಹೇಳಿದ ಪರಿಣಾಮ ಜೀಪ್ ಫಿಲಿಪೈ ಅವರು ಒಪ್ಪಿದರು. ನಿನ್ನೆ ಸಂಜೆ ನಿಶ್ಚಿತಾರ್ಥ ನೆರವೇರಿಸಲಾಯಿತು. ಇಂದು ಬೆಳಗ್ಗೆ ೮:೩೦ ರಿಂದ ೯:೩೦ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ದೂರಿ ಮದುವೆ ನಡೆಯಿತು. ಅನಂತರಾಜು ಹಂಪಿ ಜನತಾ ಪ್ಲಾಟ್‌ನ ರೇಣುಕಮ್ಮ ದಿ. ಅಂಜಿನಪ್ಪ ಅವರ ಸುಪುತ್ರ. ಹಂಪಿಯ ಜನ ಈ ಅಪರೂಪದ ಮದುವೆಗೆ ಸಾಕ್ಷಿಯಾದರು.