ವಿದೇಶಿ ಪಕ್ಷಿಗಳು ಆರೋಗ್ಯವಾಗಿವೆ: ಪಾಟೀಲ

ಲಕ್ಷ್ಮೇಶ್ವರ, ಜ9- ಸಮೀಪದ ಮಾಗಡಿ ಕೆರೆಯಲ್ಲಿನ ವಿದೇಶಿ ಬಾನಾಡಿಗಳು ಈಗ ಸ್ವಚ್ಛಂದವಾಗಿ ತೇಲಾಡುತ್ತಿದ್ದರು ಅವುಗಳಿಗೂ ಸಹ ಆತಂಕದ ಛಾಯೆ ಮೂಡಿದೆ.
ಎಲ್ಲೆಡೆಯೂ ಹಕ್ಕಿಜ್ವರದ ಭೀತಿ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯವರು ಮತ್ತು ಪಶುಸಂಗೋಪನ ಇಲಾಖೆಯವರು ಕೆರೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಆದರೆ ಇದುವರೆಗೂ ಅಂತಹ ಪ್ರಕರಣಗಳು ಕಂಡು ಬಂದಿಲ್ಲ.
ವಿದೇಶಿ ಬಾನಾಡಿಗಳು ಆಹಾರ ಅರಿಸಿ ನೂರಾರು ಕಿಲೋಮೀಟರ್ ದೂರ ಹಾರಿ ಶೇಂಗಾ ಮತ್ತು ಕಡಲೆಯನ್ನು ಮೇದು ವಾಪಸ್ ಬರುತ್ತಿವೆ. ರೈತರು ಕಡಲಿಗೆ ಕೀಟಬಾಧೆ ತಗುಲಬಾರದು ಎಂಬ ಉದ್ದೇಶದಿಂದ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ ಇದನ್ನು ಮೇದು ಬರುವ ಪಕ್ಷಿಗಳು ಕೆರೆಯಲ್ಲಿ ನಿಸ್ತೇಜವಾಗಿ ಅಲ್ಲೊಂದು ಇಲ್ಲೊಂದು ದಂಡೆಗೆ ಬಂದು ಬೀಳುತ್ತಿವೆ. ಇದನ್ನು ಕಂಡ ಕೂಡಲೆ ಅರಣ್ಯ ಇಲಾಖೆಯವರು ಗ್ರಾಮಸ್ಥರ ಸಹಕಾರದೊಂದಿಗೆ ಪಕ್ಷಿಗಳಿಗೆ ರೋಗನಿರೋಧಕ ಔಷಧಿಗಳನ್ನು ಕುಡಿಸಿ ಮತ್ತೆ ಅವು ಸಹಜ ಸ್ಥಿತಿಗೆ ಬಂದ ನಂತರ ಕೆರೆಗೆ ಹಾರಿ ಬಿಡುತ್ತಿದ್ದಾರೆ.
ಈ ಕುರಿತು ಗ್ರಾಪಂ ಮಾಜಿ ಶಿವರಾಜ್ ಗೌಡ ಪಾಟೀಲ್ ಅವರು ಸಂಜೆವಾಣಿಯೊಂದಿಗೆ ಮಾತನಾಡಿ ಕೆರೆಯಲ್ಲಿ ಪಕ್ಷಿಗಳಿಗೆ ಯಾವುದೇ ರೋಗಬಾಧೆ ಅಥವಾ ಹಕ್ಕಿಜ್ವರ ಇಲ್ಲ ವಿದೇಶದಿಂದ ಬಂದಿರುವ ಎಲ್ಲ ಪಕ್ಷಿಗಳು ಆರೋಗ್ಯವಾಗಿವೆ. ಅಲ್ಲೊಂದು ಇಲ್ಲೊಂದು ಪಕ್ಷಿಗಳು ಕ್ರಿಮಿನಾಶಕ ಸಿಂಪಡಿಸಿದ ಕಡಲೆಯನ್ನು ತಿಂದು ಅಸ್ತವ್ಯಸ್ತವಾಗುತ್ತಿದ್ದು ಅವುಗಳಿಗೆ ಕೂಡಲೇ ಔಷಧಿಗಳನ್ನು ಹಾಕಿ ಅವುಗಳ ಆರೋಗ್ಯವನ್ನು ಕಾಪಾಡಲಾಗುತ್ತಿದೆ ಎಂದರು.