ವಿದೇಶಿ ಡ್ರಗ್ ಪೆಡ್ಲರ್ ಸೆರೆ

ಬೆಂಗಳೂರು,ಏ.೨೦-ಡ್ರಗ್ಸ್ ಮಾರಾಟ ಸಾಗಾಟದ ವಿರುದ್ಧ ಸಮರ ಸಾರಿರುವ ಪೂರ್ವ ವಿಭಾಗದ ಪೊಲೀಸರು ನೈಜೀರಿಯಾದ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ೨ ಲಕ್ಷ ೪೦ ಸಾವಿರ ರೂ ಮೌಲ್ಯದ ೧೦ ಗ್ರಾಂ ಹೆರಾಯಿನ್ ಹಾಗೂ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಅನ್ಬೇರಾ ರಾಜ್ಯದ ಪೋಪಾನಾ ಅಲಿಯಾಸ್ ಜೇಮ್ಸ್(೨೭)ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಬಂಧಿತ ವಿದೇಶಿ ಪ್ರಜೆಗೆ ಮನೆ ಬಾಡಿಗೆಗೆ ನೀಡಿದ್ದ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ೨ ಲಕ್ಷ ೪೦ ಸಾವಿರ ಮೌಲ್ಯದ ೧೦ ಗ್ರಾಂ ಹೆರಾಯಿನ್ ಹಾಗೂ ೧.೫ಗ್ರಾಂ ಕೊಕೇನ್ ,ಮೊಬೈಲ್,ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಗೋವಿಂದಪುರದ ಹೆಚ್.ಬಿ.ಆರ್ ಲೇಔಟ್‌ನ ೫ನೇ ಬ್ಲಾಕ್, ಅಂಬೇಡ್ಕರ್ ಮೈದಾನದ ಸರ್ವಿಸ್ ರಸ್ತೆಯಲ್ಲಿ ಅರೋಪಿಯು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದು ತಿಳಿಸಿದರು.