ವಿದೇಶಿ ಆಮದು ನಿಯಮದ ಸರಳೀಕರಣದಿಂದ ಲಸಿಕೆಯ ಲಭ್ಯತೆ ಹೆಚ್ಚಳ

ದಾವಣಗೆರೆ.ಜೂ.೬; ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ  ಎರಡನೇ ಡೋಸ್ ಕೋವಾಕ್ಸಿನ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಮ್.ಸುರೇಶ್ ಹಾಗೂಮಹಾನಗರ ಪಾಲಿಕೆ ಸದಸ್ಯರಾದ ಕೆ.ಎಮ್.ವೀರೇಶ್, ಎಸ್.ಮಂಜುನಾಥ ನಾಯ್ಕ್, ಪಾಲಿಕೆ ನಾಮನಿರ್ದೇಶನ ಸದಸ್ಯ ಪಿ.ಎಸ್.ಬಸವರಾಜ್ ಅವರುಗಳು ಈ ಕಾರ್ಯಕ್ರಮವನ್ನು ನಿಟುವಳ್ಳಿ ಹಾಗೂ ಸುತ್ತಮುತ್ತಲಿನ ಭಾಗದ ನಿವಾಸಿಗಳಿಗೆ ವಿಶೇಷ ಮುತುವರ್ಜಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದರು.ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ  ಮಾಜಿ ಸಚೇತಕರಾದ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ  ಕೇಂದ್ರ ಸರಕಾರವು ವಿದೇಶಿ ಲಸಿಕೆಯ ಆಮದು ನಿಯಮಗಳನ್ನು ಸರಳಿಕರಣಗೊಳಸಿದೆ. ಈ ಕ್ರಮದಿಂದ ಭಾರತದಲ್ಲಿ ಲಸಿಕೆ ಇನ್ನಷ್ಟು ಸುಲಭವಾಗಿ ಜನರ ಕೈಸೇರಲಿದೆ. ಮುಂದಿನ ದಿನಗಳಲ್ಲಿ ಅಮೇರಿಕಾ, ಬ್ರಿಟನ್, ಜಪಾನ್ ಹಾಗೂ ಇತರ ದೇಶಗಳಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ಲಸಿಕೆಗಳ ಅಭಾವ ನೀಗಲಿದೆ. ನಿರೀಕ್ಷಿತ ಕೋರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸರಕಾರವು ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ.  ಸಾರ್ವಜನಿಕರು ಯಾವುದೇ ಆತಂಕ ಪಡದೇ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೋರೋನಾ ವಿರುದ್ಧ ಹೋರಾಡಬೇಕೆಂದು ಮನವಿ ಮಾಡಿದರು. ಲಸಿಕಾ ಕಾರ್ಯಕ್ರಮದಲ್ಲಿ  ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಮ್.ಸುರೇಶ್,   ಪಾಲಿಕೆ ಸದಸ್ಯರುಗಳಾದ ಕೆ.ಎಮ್.ವೀರೇಶ್,  ಎಸ್.ಮಂಜುನಾಥ ನಾಯ್ಕ್, ಪಿ.ಎಸ್.ಬಸವರಾಜ್, ಬಿಜೆಪಿ ಮುಖಂಡ ಎಲ್.ಎನ್.ಕಲ್ಲೇಶ್, ನಿಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿದ್ಯಾ ಹಾಗೂ ಹರೀಶ್ ಬಾಬು ಎನ್.ಆರ್.,  ಸೋಮಶೇಖರ್,  ವಿ.ಸಿದ್ದೇಶ್, ಸಿ.ರಮೇಶ್, ಬಿ.ಎಸ್.ರವೀಶಾಚಾರ್ ಮತ್ತಿತರರು ಇದ್ದರು.