ವಿದೇಶಿಯರ ಕ್ರೀಡಾ ಆಸಕ್ತಿ ನಮ್ಮಲ್ಲಿ ಬರಬೇಕಾಗಿದೆ:ಶ್ರೀಧರ

ತಾಳಿಕೋಟೆ:ಸೆ.14: ದೇಶದಲ್ಲಿ 125 ಕೋಟಿ ಜನಸಂಖ್ಯೆಯಲ್ಲಿ ಶೇ. 5 ರಷ್ಟು ಕ್ರೀಡಾ ಆಸಕ್ತರಿದ್ದಾರೆ ಕಾರಣ ವಿದೇಶಿಯರಲ್ಲಿರತಕ್ಕಂತಹ ಕ್ರೀಡಾ ಆಸಕ್ತಿ ನಮ್ಮಲ್ಲಿ ಬಂದು ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ತಾಳಿಕೋಟೆ ತಾಲೂಕಾ ತಹಶಿಲ್ದಾರರಾದ ಶ್ರೀಧರ ಗೋಟೂರ ಅವರು ನುಡಿದರು.
ಮಂಗಳವಾರರಂದು ಪಧವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಎಚ್.ಎಸ್.ಪಾಟೀಲ ಸ್ವತಂತ್ರ ಪಧವಿಪೂರ್ವ ಮಹಾ ವಿದ್ಯಾಲಯ ತಾಳಿಕೋಟೆ ಇವರ ಆಶ್ರಯದಲ್ಲಿ ಶ್ರೀ ಸಂಗಮೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಏರ್ಪಡಿಸಲಾದ 2022-23 ನೇ ಸಾಲಿನ ತಾಲೂಕಾ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ದ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿ ಸ್ವಾಗತಿಸಿ ಮಾತನಾಡುತ್ತಿದ್ದ ಅವರು ಸರ್ಕಾರದ ವತಿಯಿಂದ ಎಲ್ಲ ಸೌಲಬ್ಯಗಳಿವೆ ಓಲಂಪಿಕ್ ಕ್ರೀಡೆಯಲ್ಲಿಯೂ ಸಹ ಚಿನ್ನದ ಪಧಕ ಪಡೆದವರಲ್ಲಿ ವಿದೇಶಿಗರ ಸಂಖ್ಯೆಯೇ ಹೆಚ್ಚು ಕಾಣುತ್ತದೆ ಕ್ರೀಡೆ ಎಂಬುದನ್ನು ಅಳವಡಿಸಿಕೊಂಡರೆ ಸಿಸ್ತು ಅಷ್ಟೇ ಅಲ್ಲಾ ದೇಹವನ್ನು ಸದೃಢಗೊಳಿಸುತ್ತದೆ ಎಂದ ಅವರು ಒಂದು ವೇಳೆ ತಾಳಿಕೋಟೆಯಲ್ಲಿ ಓಲಂಪಿಕ್ ಕ್ರೀಡೆಯನ್ನು ಏರ್ಪಡಿಸಿದ್ದನ್ನು ಆದರೆ ತಾವು ಕೂಡಾ ಕ್ರೀಡೆಯಲ್ಲಿ ಭಾಗವಹಿಸುವದಾಗಿ ತಮ್ಮ ಮಹಾದಾಸೆಯನ್ನು ವ್ಯಕ್ತಪಡಿಸಿದ ತಹಶಿಲ್ದಾರ ಶ್ರೀಧರ ಅವರು ವಿದ್ಯಾರ್ಥಿಗಳು ಸೋಲು ಗೆಲವು ಎಂಬುದನ್ನು ಅರ್ಥೈಸಿಕೊಳ್ಳದೇ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು.
ಇನ್ನೋರ್ವ ಅಥಿತಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಮಾತನಾಡಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಆಸಕ್ತಿ ತೋರುವಂತಾಗಬೇಕು ಕ್ರೀಡಾ ಮನೋಭಾವ ವಹಿಸಿಕೊಂಡು ನಿರ್ಣಾಯಕರ ನಿರ್ಣಯದಂತೆ ನಡೆದುಕೊಳ್ಳಬೇಕೆಂದ ಅವರು ನ್ಯಾಯ ನಿರ್ಣಯ ಅಂತಿಮ ತಿರ್ಮಾನ ಸಮಿತಿಯ ಅಂತಿಮ ನಿರ್ಣಯವಾಗಿದೆ ಎಂದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಕ್ರೀಡಾಪಟುಗಳು ಆಗಬೇಕಾದರೆ ದಿನನಿತ್ಯ ವ್ಯಾಯಾಮ ಅಗತ್ಯವಾಗಿ ಮಾಡುವ ಕಾರ್ಯವಾಗಬೇಕು ವ್ಯಾಯಾಮದಿಂದ ಸದೃಢ ದೇಹ ಅದರಿಂದ ಶಕ್ತಿಯೂ ಕೂಡಾ ಬೆಳೆಯುತ್ತದೆ ಕಾರಣ ವಿದ್ಯಾರ್ಥಿಗಳು ಓದು ಬರಹದೊಂದಿಗೆ ಕ್ರೀಡಾ ಆಸಕ್ತಿ ತೋರಬೇಕೆಂದ ಅವರು ಸೋಲು ಗೆಲವು ಎಂಬುದು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಸೋತವರು ಕುಗ್ಗುವದು ಬೇಡಾ ಮುಂದಾದರೂ ಗೆದೆಯುತ್ತೇನೆ ಎಂಬ ಭಾವನೆ ದೃಢ ನಿರ್ದಾರವನ್ನು ಇಟ್ಟುಕೊಂಡು ಸಾಗಿದರೆ ಮುಂದೆಯೂ ಜಯ ಖಚಿತವಾಗುವದರಲ್ಲಿ ಯಾವ ಸಂಶಯವಿಲ್ಲಾವೆಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಉಪನ್ಯಾಸಕ ಭೀಮಣ್ಣ ಅರಕೇರಿ ಅವರು ಕ್ರೀಡಾಪಟುಗಳಿಗೆ ಪ್ರಮಾಣ ವಚನ ಭೋದಿಸಿದರು.
ಈ ಸಮಯದಲ್ಲಿ ಮುಖ್ಯೋಪಾದ್ಯಾಯ ಅಶೋಕ ಕಟ್ಟಿ, ಪ್ರಾಚಾರ್ಯ ಶ್ರೀಮತಿ ಎಂ.ಎಸ್.ಬಿರಾದಾರ, ಡಾ.ಎಚ್.ಬಿ.ನಡುವಿನಕೇರಿ, ಜೆ.ಎಂ.ಕೊಣ್ಣೂರ, ಕು.ರೇಖಾ ಪಾಟೀಲ, ಶ್ರೀಮತಿ ಸುವರ್ಣಾ ಬಿದರಕುಂದಿ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಎಸ್.ಸಿ.ಗುಡಗುಂಟಿ, ಸಿ.ಎಂ.ಹಳ್ಳೂರ, ವ್ಹಿ.ಎ.ವಿಜಾಪೂರ, ಎಸ್.ಎಸ್.ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರಕಾಶ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿದರು.
ಈ ಕ್ರೀಡಾಕೂಟದಲ್ಲಿ ಕಲಕೇರಿ, ಬಳಗಾನೂರ, ಮಿಣಜಗಿ ಕ್ರಾಸ್ ಶಾಲೆ, ಎಸ್.ಕೆ.ಬಾಲಕರ ಹಾಗೂ ಬಾಲಿಕೀಯರ ಪ.ಪೂ.ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.