ವಿದೇಶದಲ್ಲೂ ಶೀಘ್ರ ನಂದಿನಿ ಕೆಫೆ

ಬೆಂಗಳೂರು, ಜೂ.೨೨-ನಂದಿನಿ ಕೆಫೆ ಮೂ ಎಂಬ ವಿನೂತನ ಕೆಫೆಗಳನ್ನು ಈಗಾಗಲೇ ರಾಜ್ಯ ಮತ್ತು ಇತರ ರಾಜ್ಯಗಳಲ್ಲಿ ತೆರೆಯಲಾಗಿದ್ದು, ಈಗ ಇದನ್ನೇ ರಾಷ್ಟ್ರ ಹಾಗೂ ವಿದೇಶಗಳಲ್ಲೂ ತೆರೆಯಲು ಯೋeನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಮುಂಬೈ, ದುಬೈನಂತಹ ಮಹಾನಗರಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು ಎಂದು ಕೆಎಂಎಫ್‌ನ ನೂತನ ಅಧ್ಯಕ್ಷ ಎಲ್.ಬಿ.ಪಿ ಭೀಮನಾಯ್ಕ್ ತಿಳಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳು ದಿನಕ್ಕೆ ೮೨ ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಮುಂದಿನ ೩ ವರ್ಷಗಳಲ್ಲಿ ೧ ಕೋಟಿ ಲೀಟರ್ ಹಾಲಿನ ಸಂಸ್ಕರಣಾ ಸಾiರ್ಥ್ಯಕ್ಕೆ ತಲುಪುವ ಗುರಿ ಹೊಂದಿದ್ದೇವೆ. ಅಲ್ಲದೆ ವಾರ್ಷಿಕವಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸುಮಾರು ೫೦ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡಿ ಅದರಿಂದ ೨೫ ಕೋಟಿ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ಈಗ ಇದರ ಪ್ರಮಾಣವನ್ನು ಮುಂದಿನ ಮೂರು ವರ್ಷಗಳಲ್ಲಿ ೧೦೦ ಕೋಟಿ ರೂಗೆ ರಫ್ತಿನ ಗುರಿಯನ್ನು ಹೆಚ್ಚಿಸಲು ಕ್ರಮ ವಹಿಸಲಾಗುತ್ತದೆ. ಇದಕ್ಕಾಗಿ ಸೂಕ್ತ ಕ್ರಮಗಳನ್ನು ಅನುಸರಿಸರಿಸಲಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸಿದ ಅಧ್ಯಕ್ಷ ಭೀiನಾಯ್ಕ್, ಹೈನೋದ್ಯಮ ಕ್ಷೇತ್ರದ ಉನ್ನತಿಗೆ ಶ್ರಮಿಸುತ್ತಿರುವ ಘನ ಸರ್ಕಾರಕ್ಕೆ ರಾಜ್ಯದ ರೈತಾಪಿ ವರ್ಗದ ಪರವಾಗಿ ಹೃತ್ಪೂರ್ವಕ ಧನ್ಯವಾದ ತಿಳಿಸುತ್ತೇವೆ. ಹಾಗೇ ಕೆಎಂಎಫ್‌ನ ನೂತನ ಅಧ್ಯಕ್ಷನಾಗಿ ರಾಜ್ಯದ ಹೈನುಗಾರಿಕೆ ಹಾಗೂ ರೈತರ ಪ್ರಗತಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.