ವಿದೇಶಗಳಿಂದ ೪,೦೦೯ ಮಕ್ಕಳ ದತ್ತು

ನವದೆಹಲಿ,ಏ.೨- ಕಳೆದ ವರ್ಷ ಏಪ್ರಿಲ್ ೨೦೨೩ ರಿಂದ ಈ ವರ್ಷದ ಮಾರ್ಚ್ ತನಕ ದೇಶ ಮತ್ತು ವಿದೇಶದಲ್ಲಿರುವ ಕುಟುಂಬಗಳಿಂದ ೪,೦೦೯ ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಈ ಮಾಹಿತಿ ನೀಡಿವೆ.
೨೦೧೮-೧೯ ರಲ್ಲಿ ೪,೦೨೭ ಮಂದಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿತ್ತು.ಮತ್ತೊಮ್ಮೆ ದೇಶದಲ್ಲಿ ದತ್ತು ಪಡೆದ ಸಂಖ್ಯೆ ೪ ಸಾವಿರ ಗಡಿ ದಾಟಿದೆ. ೨೦೧೫-೧೬ ರಿಂದ ೩,೫೬೦ ರಲ್ಲಿ ದೇಶದೊಳಗಿನ ದತ್ತು ಪಡೆಯಲಾಗಿತ್ತು ಎಂದು ತಿಳಿಸಲಾಗಿದೆ.
೨೦೨೨-೨೩ ರಲ್ಲಿ, ಒಟ್ಟು ದತ್ತುಗಳ ಸಂಖ್ಯೆ ೩,೪೪೧ ರಷ್ಟಿತ್ತು, ಹಿಂದಿನ ಹಣಕಾಸು ವರ್ಷದಲ್ಲಿ ೩,೪೦೫ ರಿಂದ ಹೆಚ್ಚಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿರುವ ಈ ಅಂಕಿಅಂಶಗಳಲ್ಲಿ ಮಾಹಿತಿ ನೀಡಿದೆ.
ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ ಸಂಗ್ರಹಿಸಿದ ದತ್ತಾಂಶದ ಪ್ರಕಾರ ೨೦೨೩-೨೪ರಲ್ಲಿ ೪,೦೦೯ ದತ್ತುಗಳಲ್ಲಿ ೪೪೯ ಅಂತರ್-ದೇಶದ ದತ್ತುಗಳಾಗಿವೆ ಎಂದು ತೋರಿಸುತ್ತದೆ. ‘ಪೋಸ್ಟರ್ ದತ್ತು’ ಪರಿಕಲ್ಪನೆಯನ್ನು ಸೇರಿಸಲು ದತ್ತುಗಳ ವ್ಯಾಪ್ತಿಯನ್ನು ವಿಸ್ತರಿಸಿದೆ.
ಇಲ್ಲಿಯವರೆಗೆ, ದತ್ತು ನಿಯಮಾವಳಿ ೨೦೨೨ ಕ್ಕೆ ಅನುಗುಣವಾಗಿ ದೇಶಾದ್ಯಂತ ೧೦ ಮಕ್ಕಳನ್ನು ಪೊ?ಷಕ ದತ್ತು ತೆಗೆದುಕೊಳ್ಳಲಾಗಿದೆ. ಮೇಲಾಗಿ, ತಮ್ಮ ಕುಟುಂಬದಲ್ಲಿ ಅನಾಥ ಮಗುವನ್ನು ತೆಗೆದುಕೊಳ್ಳಲು ಉತ್ಸುಕರಾಗಿರುವ ಸಂಬಂಧಿಕರು ಅಥವಾ ದತ್ತು ಪಡೆಯಲು ಕಾಯುತ್ತಿರುವ ನಿರೀಕ್ಷಿತ ಪೊ?ಷಕರ ಪ್ರಕರಣಗಳನ್ನು ತ್ವರಿತಗೊಳಿಸಲಾಗಿದೆ ಎಂದು ತಿಳಿಸಿದೆ.
ದೇಶದೊಳಗಿನ ದತ್ತುಗಳ ಅಡಿಯಲ್ಲಿ ದತ್ತು ಪಡೆದ ೪೧೨ ಮಕ್ಕಳು, ‘ಸಂಬಂಧಿ ಮತ್ತು ಹಂತದ ದತ್ತು’ ವರ್ಗದಲ್ಲಿದ್ದಾರೆ. ಭಾರತದಲ್ಲಿನ ಸಂಬಂಧಿಕರು ಮತ್ತು ಮಲ ಪೋಷಕರು ಕ್ರಮವಾಗಿ ೩೧೧ ಮತ್ತು ೧೦೧ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳು ಮಾಹಿತಿ ನೀಡಿವೆ.
ದತ್ತುಗಳ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮುಖ ಅಂಶವೆಂದರೆ ದೇಶದೊಳಗೆ ದತ್ತು ಪಡೆಯುವುದನ್ನು ಉತ್ತೇಜಿಸುವತ್ತ ಗಮನಹರಿಸಲಾಗಿದೆ. ಹೊಸ ಕಾನೂನಿನಡಿಯಲ್ಲಿ ಒಂದು ಪ್ರಮುಖ ಬದಲಾವಣೆಯೆಂದರೆ, ದತ್ತು ಆದೇಶವನ್ನು ಅಂಗೀಕರಿಸುವ ಅಧಿಕಾರವನ್ನು ನ್ಯಾಯಾಲಯದ ಬದಲಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದೆ.