ವಿಡಿಐಟಿ ವಿದ್ಯಾರ್ಥಿಗಳಿಂದ ಬಿಲ್ಡ್ ಎಕ್ಸ್‍ಪೋಗೆ ಭೇಟಿ

ಧಾರವಾಡ, ಡಿ27: ಅಸೊಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಇವರ ಜಂಟಿ ಸಹಯೋಗದಲ್ಲಿ ಬಿಲ್ಡ್ ಎಕ್ಸ್ ಪೆÇೀ ಹೆಸರಿನಲ್ಲಿ ಕಟ್ಟಡ ಸಾಮಗ್ರಿಗಳ ಹಾಗೂ ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನವನ್ನು ಧಾರವಾಡದ ಕಲಾಭವನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಕಟ್ಟಡಗಳ ನಿರ್ಮಾಣದಲ್ಲಿ ಬಳಸಲಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ, ಪರಿಸರ ಪ್ರೇಮಿ ಕಟ್ಟಡ ಸಾಮಗ್ರಿಗಳು, ಲಘು ಸಿಮೆಂಟ್ ಬ್ಲಾಕ್ ಗಳು, ಅಲಂಕಾರಿಕ ಸಾಮಗ್ರಿಗಳನ್ನು ಈ ಬಿಲ್ಡ್ ಎಕ್ಸ್ಪೋದಲ್ಲಿ ಪ್ರದರ್ಶಿಸಲಾಯಿತು.
ಕೆಎಲ್‍ಎಸ್ ವಿ ಡಿ ಐ ಟಿ ಹಳಿಯಾಳದ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಬಿಲ್ಡ್ ಎಕ್ಸ್ ಪೆÇೀಗೆ ಭೇಟಿ ನೀಡಿ ನುರಿತ ಇಂಜಿನಿಯರ್ ಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದುಕೊಂಡರು ಎಂದು ಡಾ. ವಿ ಎ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.