ವಿಠ್ಠಲ ಹೇರೂರ ಜಯಂತೋತ್ಸವ ಸರಕಾರ ಘೋಷಣೆ ಮಾಡಲಿ :ರಾಜು ಪಾಟೀಲ್

ಸೇಡಂ,ಡಿ, 04 : ಮುಂಬರುವ ದಿನಗಳಲ್ಲಿ ದಿವಂಗತ ವಿಠ್ಠಲ ಹೇರೂರ ಅವರ ಜಯಂತೋತ್ಸವವನು ಸರಕಾರವೇ ಘೋಷಣೆ ಮಾಡಬೇಕು ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಜು ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ವಿಠ್ಠಲ ಹೇರೂರ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ದಿವಂಗತ ವಿಠ್ಠಲ ಹೇರೂರ ಅವರ 8 ನೇ ಪುಣ್ಯಸ್ಮರಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋಲಿ ಸಮಾಜವನ್ನು ಜನಜಾಗೃತಿ ಮಾಡುವಲ್ಲಿ ಅವರ ನಿರಂತರ ತ್ಯಾಗದ ಫಲವಾಗಿ ಇಂದು ರಾಜ್ಯಾದ್ಯಂತ ಕೋಲಿ ಸಮಾಜ ಜಾಗೃತ ವಾಗಿದೆ.ತುಳಿದು ಬದುಕುವವರ ಮದ್ಯ ಸಮಾಜದ ಏಳ್ಗೆಗಾಗಿ ಬದುಕಿ ತೋರಿಸಿದ್ದಾರೆ ಎಂದರು.
ಎಪಿಎಮ್ಸಿ ಮಾಜಿ ಅದ್ಯಕ್ಷ ಸಿದ್ದು ಬಾನರ ಮಾತನಾಡಿ 1996 ರಲ್ಲಿ ದಿವಂಗತ ವಿಠ್ಠಲ ಹೇರೂರ ಅವರು ಕಲಬುರ್ಗಿಯಲ್ಲಿ ಬೃಹತ್ ಸಮಾವೇಶ ಮಾಡಿ ಪ್ರತಿ ಹಳ್ಳಗಳಲ್ಲಿ ಬೇಟಿ ನೀಡಿ ಸಮಾಜದ ಗುರು ನಿಜಶರಣ ಅಂಬಿಗಾರ ಚೌಡಯ್ಯ ಎಂದು ತೋರಿಸಿಕೊಟ್ಟವರು.ಕೋಲಿ ಸಮಾಜದ 39 ಪರ್ಯಾಯ ಪದಗಳನ್ನು ಎಸ್,ಟಿ,ಗೆ ಸೇರಿಸಬೇಕೆಂದು ಜೀವಂತ ವರೆಗೆ ಹೋರಾಡಿದರು ಎಂದರು.ದಿವ್ಯ ಸಾನಿದ್ಯ ಪರಮ ಪೂಜ್ಯ ಶ್ರೀ ಶಿವಸಿದ್ದಸೋಮೆಶ್ವರ ಮಹಾಸ್ವಾಮಿಗಳು ಗುಂಡೆಪಲ್ಲಿ ಕೆ, ವಹಿಸಿದ್ದರು.
ವಿಠ್ಠಲ ಹೇರೂರ ಯುವ ಬ್ರಿಗೇಡ್ ವತಿಯಿಂದ 22 ಜನ ಯುವಕರು ರಕ್ತದಾನ ಮಾಡಿದರು ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಮಾಲಾ ಹಾಕಿಕೊಂಡು ಉಪವಾಸವಿದ್ದ ಸ್ವಾಮಿಗಳು ರಕ್ತ ದಾನ ಮಾಡಿದರು.
ಗ್ರಾಮ ಪಂಚಾಯತಿ ಅದ್ಯಕರಿಗೆ ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ಜಿಲ್ಲಾ ಬಿಜೆಪಿ
ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಸಿದ್ದು ಬಾನರ,ನೌಕರರ ಸಂಘದ ಅದ್ಯಕ್ಷ ಶಿವಶಂಕ್ರಯ್ಯಸ್ವಾಮಿ, ಬೀಮರಾವ ಅಳ್ಳೊಳ್ಳಿ, ಯುವ ಬ್ರಿಗೇಡ್ ಅದ್ಯಕ್ಷ ಚನ್ನಬಸಪ್ಪ,
ಸುನೀತಾ ತಳವಾರ, ಶ್ರೀನಿವಾಸ ಮೊಕದಮ್,ನಾಗೇಂದ್ರಪ್ಪ ಲಿಂಗಪಲ್ಲಿ,ಮಲ್ಲಿಕಾರ್ಜುನ ಬೈಂಡ್ಲೆ,ಶ್ರಿಪಾದ ಬೆಳಗುಂಪಿ,ಪೆÇ್ರ,ಬಿ, ಆರ್ ಅಣ್ಣಸಾಗರ,ಸುಬಾಶ ಆರಬೋಳ, ಬೀಮರಾಯ ಹಣಮನಳ್ಳಿ,ಶರಣಬಸಪ್ಪ ಸಿಆರ್,ಪಿ,ಶರಣು ಮಳಖೇಡ,
ದೊಡ್ಡ ನಾಗಪ್ಪ ಸಾತಾಪೆÇೀರ, ರುದ್ರು ಪಿಲ್ಲಿ,ಪತ್ರಕರ್ತ ಸಂಘದ ಅದ್ಯಕ್ಷ ಶಿವಕುಮಾರ ನಿಡಗುಂದಾ, ಶರಣಪ್ಪ ಎಳ್ಳಿ, ಸಂತೋಷ ತಳವಾರ, ರಾಜು ಮುರಾರಿ, ಸಂತೋಷ ಮೆಕಾನಿಕ್,ಶಿವಕುಮಾರ ಜುಲ್ಪಿ, ಚಂದ್ರಾಮ ಜೋಗಿ,ಅರವಿಂದ ಸಣ್ಣಂಗಿ,ವೆಂಕಟೇಶ ಬಿಲಕಲ್, ರವಿಂದ್ರ ನೀಲಾ, ಇನ್ನಿತರರಿದ್ದರು.