ವಿಠ್ಠಲ ಶ್ರೀ ಪ್ರಶಸ್ತಿ ಪ್ರದಾನ


ಚನ್ನಮ್ಮನ ಕಿತ್ತೂರು,ಅ.8: ಪಟ್ಟಣದ ಸೋಮವಾರ ಪೇಠೆಯ ನಿವಾಸಿ ಉತ್ತಮ ಶಿವಾನಂದ ಮಾಳೋದೆ ರಾಜ್ಯ ಮಟ್ಟದ ವಿಠ್ಠಲ ಶ್ರೀ ಪ್ರಶಸ್ತಿ ಪಡೆದಿದ್ದಾರೆ.
ಉತ್ತಮ ಮಾಳೋದೆ ಅವರು ಮಾಡಿದ ಅನೇಕ ಸಮಾಜ ಪರ ಕಾರ್ಯಗಳನ್ನು ಪರಿಗಣಿಸಿ ನಾಮದೇವ ಶಿಂಪಿ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಬನವಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ವಿಠ್ಠಲ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇವರ ಸಾಧನೆಗೆ ಕಿತ್ತೂರು ನಾಮದೇವ ಶಿಂಪಿ ಸಮಾಜದ ಮುಖಂಡರು, ಸ್ನೇಹಿತರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.