ವಿಠ್ಠಲ ಶ್ರೀ ಪ್ರಶಸ್ತಿ ಗೆ ರಾಘವೇಂದ್ರ ಆಯ್ಕೆ

 ಹಿರಿಯೂರು.ಮಾ .144-  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಿವೃತ್ತ ಅಧೀಕ್ಷಕರಾಗಿದ್ದ  ಹಿರಿಯೂರಿನ  ಶ್ರೀಯುತ‌ ಎಂ.ಮಾಧುರಾವ್ ಮತ್ತು ಶ್ರೀಮತಿ ಗಿರಿಜಾ ಬಾಯಿ ಇವರ ಸುಪುತ್ರ ರಾಘವೇಂದ್ರ ರಾವ್  ಮಿರಜ್ಕರ್  ಇವರು ನಟನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ವತಿಯಿಂದ ನಾಮದೇವ ಶಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಾಧಕರಿಗೆ ನೀಡುವ ವಿಠ್ಠಲಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ರಾದ  ಮಂಜುನಾಥ್ ರೇಳೇಕರ್ ಮೂಡಲಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಘವೇಂದ್ರ ಇವರು ವಿಠಲ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ  ಅಪಾರ ಸ್ನೇಹಿತರು ಅಭಿನಂದಿಸಿದ್ದಾರೆ.