ವಿಠಲ್ ಹೇರೂರು ಜಯಂತಿ ರಾಜ್ಯಾದ್ಯಂತ ಆಚರಿಸಲು ಕೋಲಿ ಸಮಾಜದವರಿಗೆ ಉಮೇಶ ಮುದ್ನಾಳ ಕರೆ

ಯಾದಗಿರಿ,ಎ. 09: ವಿಠಲ್ ಹೇರೂರು ಅವರ 70ನೇ ಜನ್ಮದಿನಾಚರಣೆಯನ್ನು ರಾಜ್ಯದಾದ್ಯಂತ ಎಲ್ಲ ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಮಾಜ ಬಾಂಧವರು ಆಚರಿಸಬೇಕೆಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಮಾಜದ ಸಂಘಟನೆ ಮಾಡಿದ ವಿಠಲ್ ಹೇರೂರ ಅವರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬ ಕೋಲಿ ಸಮಾಜಿಕರ ಕರ್ತವ್ಯವಾಗಬೇಕು ಎಂದು ತಿಳಿಸಿರುವ ಅವರು ಎಲ್ಲ ಸಮಾಜದ ಸಂಘಟನೆಗಳು ಜಯಂತಿ ಆಚರಣೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ದಿ: 10.04.2023 ರಂದು ಸೋಮವಾರ ಯಾದಗಿರಿಯ ಹಳೆ ಟೋಕ್ರೆ ಕೋಲಿ ಸಮಾಜದ ಕಚೇರಿಯಲ್ಲಿ ಅದ್ದೂರಿಯಾಗಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಗುವುದು.