ವಿಠಲಾಪುರ ತೋರಣಗಲ್ಲಿನಲ್ಲಿ ಓಕಳಿ ಸಂಭ್ರಮ

ಸಂಡೂರು :ಏ:16 ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹಿರಿಯ ಕಿರಿಯರೆನ್ನುವ ಬೇಧ ಭಾವ ಇಲ್ಲದೇ ಹಿರಿಯ ಕಿರಿಯರು ಪರಸ್ಪರ ಬಣ್ಣ ಎರೆಚಿಕೊಂಡು ಸಂಭ್ರಮಿಸಿದರು. ಜಾತಿ ಮತ ಧರ್ಮ ಬೇಧ ಭಾವ ವಿಲ್ಲದೇ ವರ್ಷಕ್ಕೊಮ್ಮೆ ಬರುವ ಓಕಳಿ ಹಬ್ಬವನ್ನು ಗ್ರಾಮದ ಜನತೆ ಯುಗಾದಿ ಹಬ್ಬದಂದು ಆಚರಿಸಿಕೊಂಡು ಸಂತೋಷದಿಂದ ಓಕಳಿ ಆಟವನ್ನು ಆಡಿ ಕುಣಿದು ಕುಪ್ಪಳಿಸಿದರು. ಅದೇ ರೀತಿ ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯನ್ನೊಳಗೊಂಡು ವರ್ಷದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಆಚರಿಸುವುದರ ಜೊತೆಗೆ ಬಣ್ಣದ ಓಕಳಿಯನ್ನು ಸಂಭ್ರಮದಿಂದ ಆಚರಿಸಿದರು.
ಕೆಲ ಗ್ರಾಮೀಣ ಭಾಗಗಳಲ್ಲಿ ತರುಣ ತರುಣಿಯರು ಉತ್ಸಾಹದಿಂದ ಅವರವರ ಗ್ರಾಮಗಳಲ್ಲಿ ದೊಡ್ಡ ದೊಡ್ಡ ಮರಗಳಿಗೆ ಜೋಕಾಲಿ ಕಟ್ಟಿ ಆಡುವುದು ವಿಶೇಷವಾಗಿದೆ. ಈ ಹಬ್ಬದ ಮುಖ್ಯ ವಿಶೇಷವೇನೆಂದರೆ, ಗ್ರಾಮೀಣ ಬಾಗದ ಯುವಕರು ತಮ್ಮ ಶಕ್ತಿಯನ್ನ ಪ್ರದರ್ಶಿಸಲು ಗುಂಡು ಎತ್ತುವುದು ಎತ್ತಿನ ಗಾಡಿಗಳಿಗೆ ಚಕ್ರವನ್ನ ಸೇರಿಸುವುದು, ಕಬ್ಬಿಣ ದೊಡ್ಡ ಗಾತ್ರದ ಸಲಾಕೆಗಳನ್ನು ಒಂದೇ ಕೈಯಿಂದ ಎತ್ತುವುದು ಸೇರಿದಂತೆ ಹಲವಾರು ಶಕ್ತಿ ಸಾಮಥ್ರ್ಯದ ಸಾಹಸ ಮಯ ದೃಶ್ಯಗಳನ್ನು ಪ್ರದರ್ಶನದಲ್ಲಿ ನಡೆಸಿಕೊಟ್ಟು ಯುವಕರು ಗ್ರಾಮದ ಜನರ ಗಮನ ಸೆಳೆದರು. ಯುಗಾದಿ ಹಬ್ಬದ ವಿಶೇಷವಾಗಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಗ್ರಾಮೀಣ ಭಾಗದ ಜನರಲ್ಲಿ ಹಲಗೆ ಬಾರಿಸುವುದು ಕುಡಿದು ಕುಪ್ಪಳಿಸುವುದು ಅವರಿವರೆನ್ನದೇ ಪ್ರತಿಯೊಬ್ಬರನ್ನು ಒಟ್ಟು ಗೂಡಿಸಿಕೊಂಡು ಹಬ್ಬವನ್ನು ಆಚರಿಸುತ್ತರುವುದು ವಿಶೇಷವಾಗಿತ್ತು.