ವಿಟಿಯುನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕಲಬುರಗಿ:ಫೆ.29:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಪ್ರಾದೇಶಿಕ ಕಛೇರಿ, ಸ್ನಾತಕೋತ್ತರ ಕೇಂದ್ರ, ಕಲಬುರಗಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸರ್, ಸಿ. ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ವಿಜೇತರಾದ ಡಾ. ಎಮ್ ಎಸ್ ಜೋಗದ್, ಶ್ರೀ. ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆಗಮಿಸಿದ್ದರು. ಶ್ರಿಯುತರು ಸಭೆಯನ್ನು ಕುರಿತು, ಸರ್ ಸಿ. ವಿ. ರಾಮನ್ ರವರ ಜೀವನದ ಹಲವಾರು ಪ್ರಸಂಗಗಳ ಬಗ್ಗೆ ಉಲ್ಲೇಖಿಸಿದರು ರಾಮನ್ ರವರ ಅಪೂರ್ವ ಸಾಧನೆಗಳು, ಅವಿಷ್ಕಾರ ಬಗ್ಗೆಯೂ ವಿವರಿಸಿದರು. ವಿಶ್ವದ ಅಭಿವೃದ್ದಿಗೆ ಭಾರತೀಯರು ನೀಡಿದ ಕೊಡಗೆಗಳನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ಸಮಾಜಕ್ಕೆ ಉಪಯೋಗವಾಗುವ ಹೊಸ ಹೊಸ ಅವಿಷ್ಕಾರಗಳು ಮಾಡಲು ಕರೆನೀಡಿದರು.
ಸಭೆಯ ಅಧ್ಯಕ್ಷೆತೆಯನ್ನು ವಹಿಸಿದ ಡಾ. ಬಸನರಾಜ ಗಾದಗೆ, ಪ್ರಾದೇಶಿಕ ನಿರ್ದೇಶಕರು ವಿ.ತಾ.ವಿ ಪ್ರಾದೇಶಿಕ ಕಛೇರಿ ಕಲಬುರಗಿ ಇವರು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ತಿಳಿಸಿದರು. ಡಾ. ಶಂಭುಲಿಂಗಪ್ಪ ವಿಶೇಷಾಧಿಕಾರಿಗಳು ವಿ.ತಾ.ವಿ ಪ್ರಾದೇಶಿಕ ಕಛೇರಿ ಕಲಬುರಗಿ ರವರು ಉಪಸ್ಥಿತರಿದ್ದರು. ವಿತಾವಿಯ ಭೋಧಕ, ಭೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರೊ. ಶಿಲ್ಪಾ ಜೋಶಿ, ಕಾರ್ಯಕ್ರಮವನ್ನು ನಿರೂಪಿಸಿ ಹಾಗೂ ವಂದಿಸಿದರು.