ಕಲಬುರಗಿ,ಅ 28: ಭಾರತ ಸರಕಾರದ ದೂರ ಸಂಪರ್ಕ ಮಂತ್ರಾಲಯದ ವತಿಯಿಂದ ದೇಶದಾದ್ಯಂತ 100 ಪ್ರಯೋಗಾಲಯಗಳನ್ನು ಹಲವಾರು ವಿದ್ಯಾಸಂಸ್ಥೆಗಳಲ್ಲಿ ತೆರೆಯಲು ನಿರ್ಧರಿಸಲಾಗಿದ್ದು ಕರ್ನಾಟಕದಲ್ಲಿ 8 ವಿದ್ಯಾಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.ಅದರಲ್ಲಿಕಲಬುರಗಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಕೇಂದ್ರಕ್ಕೆ ದೊರೆತಿದ್ದು, ಈ ಭಾಗದ ಹಲವಾರು ವಿದ್ಯಾ ಸಂಸ್ಥೆಗಳಿಗೆ ಹಾಗೂ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು
ವಹಿಸಿಕೊಳ್ಳುವುದು ಹೆಮ್ಮೆಯ ವಿಷಯವಾಗಿದೆ.
ಅ. 27 ರಂದು ರಂದು ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ -2023 ರ 7ನೇ ಆವೃತ್ತಿ ಉದ್ಘಾಟಿಸಿ ಇದೇ ಸಂದರ್ಭದಲ್ಲಿ ದೇಶದಲ್ಲಿ ಆಯ್ಕೆಯಾದ ವಿದ್ಯಾಸಂಸ್ಥೆಗಳಲ್ಲಿ ಕೊಡಮಾಡಲಾಗಿರುವ 5ಜಿ ಯೂಸ್ ಕೇಸ್ ಪ್ರಯೋಗಾಲಯಗಳನ್ನು ವಿಡೀಯೊ ಕಾನ್ಪರೆನ್ಸಿಂಗ್ ಮೂಲಕ
ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು
ಹಾಗೂ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ ಈಪ್ರಯೋಗಾಲಯಗಳು ದೇಶದ ಬೆಳವಣಿಗೆಗೆ ಹಾಗೂ ತಂತ್ರಜ್ಞಾನವನ್ನು ಜನಸಾಮಾನ್ಯರ ಜೀವನ ಸುಧಾರಣೆಗೆ ಉಪಯೋಗವಾಗುವಂತಹ ಅವಿಷ್ಕಾರಗಳನ್ನು ನಡೆಸಿ, ಎಲ್ಲಾ
ವರ್ಗದ ಜನರಿಗೆ ಉಪಯೋಗವಾಗುವಂತಹ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ಕಲಬುರಗಿಯ ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜ
ಗಾದಗೆ,ಬೋಧಕ, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.