ವಿಜ್ಞಾನ ವಿಶಾಲ ಕ್ಷೇತ್ರ: ಬಿಲಗುಂದಿ

ವಾಡಿ: ಮಾ.7: ಸಕಲ ಜೀವರಾಶಿಗಳ ಒಳಿತಿಗೆ ವಿಜ್ಞಾನ ಸದ್ಬಳಕೆಯಾಗಬೇಕು ಮನುಷ್ಯ ತನ್ನ ದೈನಂದಿನ ಬದುಕಿನಲ್ಲಿ ವಿಜ್ಞಾನವನ್ನೆ ಅವಲಂಬಿತವಾಗಿದ್ದರು ವಿಜ್ಞಾನದ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಶಿಕ್ಷಕ ಅಪ್ಪಾರಾವ ಬಿಲಗುಂದಿ ಹೇಳಿದರು .

ಮಂಗಳವಾರ ಪಟ್ಟಣದ ಅಮೃತ ಜ್ಞಾನ ಶಿಕ್ಷಣ ಸಂಸ್ಥೆಯ ಡಾ. ಬಾಬಾಸಾಹೇಬ ಅಂಬೇಡ್ಕರ ಪ್ರೌಡ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ಯ ಡಾ. ಸಿ.ವಿ ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಪೂಜೆ ನೆರವೇರಿಸಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಜ್ಞಾನ ತುಂಬಾ ವಿಶಾಲವಾದ ಕ್ಷೇತ್ರ ವಾಗಿದೆ. ಮಕ್ಕಳು ಪ್ರತಿಯೊಂದು ವಸ್ತುವನ್ನು ವಿಮರ್ಶೆಗೆ ಒಳಪಡಿಸಬೇಕು ಅದರ ಬಗ್ಗೆ ಪ್ರಶ್ನೆಗಳು ಕೇಳುವುದರ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಗುಂಡು ಪಿನ್ನಿನಿಂದ ಅಂತರಿಕ್ಷದಲ್ಲಿ ಹಾರಾಡುವ ಉಪಗ್ರಹಗಳ ತಂತ್ರಗಾರಿಕೆಯ ಹಿಂದೆ ವಿಜ್ಞಾನವೆ ಅಡಗಿದೆ ಎಂದರು.

ವಿಜ್ಞಾನ ಶಿಕ್ಷಕ ಬಸವರಾಜ ಘುಳೆ ಮಾತನಾಡಿ ಸರ್ ಸಿ.ವಿ.ರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ರಾಮನ್ ಪರಿಣಾಮ ಸಿದ್ದಾಂತ ಮಂಡಿಸಿ ನೋಬೆಲ್ ಪ್ರಶಸ್ತಿ ಪಡೆದು ಭಾರತದ ಕೀರ್ತಿ ಹೆಚ್ಚಿಸಿದರು. ವಿಜ್ಞಾನ ಕ್ಷೇತ್ರದಲ್ಲಿಯ ಅವರ ಸೇವೆಯನ್ನು ಗೌರವಿಸಿ ಅವರ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಚಸಲಾಗುತ್ತದೆ ಜನಸಾಮಾನ್ಯರಿಗೂ ವಿಜ್ಞಾನದ ಬಗ್ಗೆ ತಿಳಿಸುವುದೆ ಈ ದಿನದ ಮಹತ್ವ ಎಂದು ಹೇಳಿದರು.

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಜ್ಞಾನಕ್ಕೆ ಸಂಭಂದ ಪಟ್ಟ ವಿವಿಧ ಸ್ಪರ್ದೇ ಏರ್ಪಡಿಸಿ ವಿಜೇಯಿತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಅಪ್ಪರಾವ ಬಿಲಗುಂದಿ, ಸುನಿಲ ಹಳ್ಳಿಪೇಟ, ಅರುಣಕುಮಾರ ಹುಗ್ಗಿ, ಬಸವರಾಜ ಘುಳೆ, ಲಕ್ಷ್ಮೀಕಾಂತ ಕೊಬಾಳ, ರೇಖಾ ಸ್ವಾಮಿ, ಸುವರ್ಣಾ,ಅನಿತಾಬಾಯಿ ನಾಟೆಕರ, ಪತ್ರಕರ್ತ ದಯಾನಂದ ಖಜೂರಿ ಇದ್ದರು.