
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ, ಆ31: ವಿಜ್ಞಾನವು ನಿತ್ಯ ಜೀವನದ ಅವಿಭಾಜ್ಯ ಅಂಗ. ಪ್ರತಿದಿನದ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿಜ್ಞಾನವನ್ನು ಅರಿಯುವ ಪ್ರಯತ್ನ ನಿರಂತರವಾಗಿ ಸಾಗಬೇಕಾಗಿದೆ” ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಜಿ. ಡಿ.ದಾಸರ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರದ ಎಸ್.ಟಿ.ಪಿ.ಎಮ್.ಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಚಾರಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಉದ್ಘಾಟನೆ ಮಾಡಿದ ಲಕ್ಷ್ಮೇಶ್ವರದ ಲಕ್ಷ್ಮೇಶ್ವರ ತಹಶಿಲ್ದಾರ್ ಕೆ.ಆನಂದಶೀಲ ರವರು ಮಾತನಾಡಿ “ಸುಜ್ಞಾನದ ಅಡಿಯಲ್ಲಿ ವಿಜ್ಞಾನದ ಬಳಕೆಯಾಗಬೇಕು ಅಂದಾಗ ಮಾತ್ರ ಮಾನವಕುಲಕ್ಕೆ ಒಳಿತಾಗುತ್ತದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಂ.ಮುಂದಿನಮನಿ ಮಾತನಾಡಿ “ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಬಹುತೇಕ ಶಾಲೆಗಳಲ್ಲಿ ವಿಜ್ಞಾನದ ಆಸಕ್ತಿಕರ ಪ್ರಯೋಗಗಳನ್ನು ರೂಪಿಸಿ, ರೂಡಿಸಿ ಇದರ ಮೂಲಕ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಲಾಗುತ್ತಿದೆ.ಈ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಸ್ಪರ್ಧೆಯು ಅದಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದರು.
ಲಕ್ಷ್ಮೇಶ್ವರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ, ಶಿಕ್ಷಣ ಸಂಯೋಜಕ ಹರೀಶ ಎಸ್ ನಿರ್ಣಾಯಕರಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಎಂ. ಎಚ್.ಸವದತ್ತಿ, ಪಿ.ಎಸ್.ಬಿ.ಡಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೆ.ಡಿ.ಲಮಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ.ಹೊಸಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಹರ್ಲಾಪುರ, ಎಸ್.ಟಿ.ಪಿ.ಎಂ.ಬಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಂಜೀವ ರೆಡ್ಡಿ, ನಿರ್ಣಾಯಕರಾದ ಉಪನ್ಯಾಸಕ ವಿನಾಯಕ ವೇತಾಳ, ಶೇಖರ ಚಿಕ್ಕಣ್ಣವರ, ಎಚ್.ಎಮ್.ಗುತ್ತಲ, ಮಹಾಂತೇಶ್ ಆರ್, ಉಮೇಶ ನೇಕಾರ, ನಾಗರಾಜ ಮಜ್ಜಿಗುಡ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಪಿ.ಎಸ್.ಪುರಾಣಮಠ ಸ್ವಾಗತಿಸಿದರು. ಫಕೀರೇಶ ಚಕಾರದ ಕಾರ್ಯಕ್ರಮ ನಿರೂಪಿಸಿದರು.ಬಿ.ಎಂ ಯರಗುಪ್ಪಿ ವಂದಿಸಿದರು.
ಒಟ್ಟು 27 ಪ್ರೌಢಶಾಲೆಗಳು ಭಾಗವಹಿಸಿದ್ದವು.
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ಕೆ.ಪಿ.ಎಸ್.ಬೆಳ್ಳಟ್ಟಿ(ಪ್ರೌಢವಿಭಾಗ), ದ್ವಿತೀಯ ಸ್ಥಾನ: ಪಿ.ಎಸ್.ಬಿ.ಡಿ ಬಾಲಕಿಯರ ಪ್ರೌಢಶಾಲೆ,ಲಕ್ಷ್ಮೇಶ್ವರ, ತೃತೀಯ ಸ್ಥಾನ: ಎಸ್.ಎಫ್.ಸಿ ಆಂಗ್ಲ ಮಾಧ್ಯಮ ಶಾಲೆ,ಶಿರಹಟ್ಟಿ.
ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ಕು.ಚೇತನಾ ಜನಗೊಣ್ಣವರ,ಸರಕಾರಿ ಪ್ರೌಢಶಾಲೆ,ಮಾಡಳ್ಳಿ, ದ್ವಿತೀಯ ಸ್ಥಾನ: ಕು.ರಂಜಿತಾ ತೆಗ್ಗೆಳ್ಳಿ, ಕೆ.ಪಿ.ಎಸ್ ಬೆಳ್ಳಟ್ಟಿ, ತೃತೀಯ ಸ್ಥಾನ: ಅಕ್ಷತಾ ವಿ.ಎ, ಎಸ್.ಎಫ್.ಸಿ ಆಂಗ್ಲ ಮಾಧ್ಯಮ ಶಾಲೆ, ಶಿರಹಟ್ಟಿ, ತೃತೀಯ ಸ್ಥಾನ: ಕು.ಸುಪ್ರೀತಾ ವಡಕಣ್ಣವರ, ಆಕ್ಸ್ ಫರ್ಡ್ ಸ್ಕೂಲ್,ಲಕ್ಷ್ಮೇಶ್ವರ ಪಡೆದರು.