ವಿಜ್ಞಾನ ವಸ್ತು ಪ್ರದರ್ಶನ : ಮೂವರು ವಿದ್ಯಾರ್ಥಿಗಳು ಆಯ್ಕೆ

ಚಿತ್ರದುರ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಬೆಂಗಳೂರು, ಡಿ.ಎಸ್.ಇ.ಆರ್.ಟಿ ಹಾಗೂ ಡಯಟ್ ಧಾರವಾಡ ವತಿಯಿಂದ ಈಚೆಗೆ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಹೊಳಲ್ಕೆರೆ ತಾ. ಚಿಕ್ಕಜಾಜೂರು ಅಕ್ಷರ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಎಸ್.ಪಿ ಭಾನುಪ್ರಿಯ,(ವೈಯಕ್ತಿಕ ವಿಭಾಗ) ಚಿತ್ರದುರ್ಗ ನಗರದ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಎಂ.ಡಿ ಸಾಫ್‌ವಾನ್ ಖಾನ್ ಮತ್ತು ಶಾಶ್ವತ್(ಗುಂಪು ವಿಭಾಗ) ಭಾಗವಹಿಸಿ ದಕ್ಷಿಣ ಭಾರತ ರಾಜ್ಯಗಳ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಡಯಟ್ ಪ್ರಭಾರೆ ಪ್ರಾಂಶುಪಾಲ ಡಿ.ಆರ್.ಕೃಷ್ಣಮೂರ್ತಿ, ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.