ವಿಜ್ಞಾನ ತಂತ್ರಜ್ಞಾನದ ಜ್ಞಾನವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುತ್ತದೆ:ಸಂಜೀವಕುಮಾರ ಸ್ವಾಮಿ

ಬೀದರ ಜು.22: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಸ್ಪರ್ಧಾತ್ಮಕ ಮನೋಭಾವನೆ ಮೂಡಿಸಿ ಅವರಲ್ಲಿರುವ ಪತಿಭೆ ಅರಳಲು ಸಾಧ್ಯ ಎಂದು ವಿಜ್ಞಾನ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳಾದ ಸಂಜೀವಕುಮಾರ ಸ್ವಾಮಿ ನುಡಿದರು.

ನಗರದ ಹಿಮಾಲಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ಮೀಸ ರೈಟ್ ಶಿಕ್ಷಣ ಸಂಸ್ಥೆ, ಆರ್ಯಭಟ ಪ್ರತಿಷ್ಠಾನ ಹಾಗೂ ನ್ಯೂ ಮದರ ತೆರೇಸಾ ನಗರ ಹಾಗು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಯ ಮಹೋತ್ಸವ ಹಾಗು ಚಂದ್ರಯಾನ -1 ಮತ್ತು ಚಂದ್ರಯಾನ -2 ಯಶಸ್ವಿಯ ಕುರಿತು ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಚಂದ್ರನ ಮೇಲೆ ಮಾನವನ ಮೊದಲ ಪಾದಾರ್ಪಣೆಯ ದಿನವನ್ನು ಅಮೇರಿಕಾದಲ್ಲಿ ರಾಷ್ಟ್ರೀಯ ಹಬ್ಬದ ಹಾಗೆ ಆಚರಿಸುತ್ತ ಮಕ್ಕಳಿಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಾರೆ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಆಸಕ್ತಿ, ಕುತುಹಲ, ಸ್ಪರ್ಧಾತ್ಮಕ ಮತ್ತು ವೈಜ್ಞಾನಿಕ ಮನೋಭಾವನ್ನು ನಾವು ಮೂಡಿಸಿದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲೇ ಬಲಿಷ್ಟ ಹಾಗು ಸಧ್ರಡವಾಗಿ ಬೆಳೆಯಲು ಸಹಾಯವಾಗುತ್ತದೆ, ಜೊತೆಗೆ ನಮ್ಮ ಭಾರತೀಯ ವಿಜ್ಞಾನಿಗಳ ಸತತ ಪ್ರಯತ್ನದಿಂದ ಭಾರತವು ಚಂದ್ರನ ಮೇಲೆ ತನ್ನ ಧ್ವಜವನ್ನು ನೆಡುವ ವಿಶ್ವದಲ್ಲಿಯೇ ನಾಲ್ಕನೇ ದೇಶವಾಯಿತು, ಚಂದ್ರನ ಅಂಗಳದ ಮೇಲೆ ನೀರಿನ ಕಣಗಳ ಇರುವಿಕೆಯನ್ನು ನಮ್ಮ ಭಾರತಿಯ ವಿಜ್ಞಾನಗಳು ಯಶಸ್ವಿಯಾಗಿ ಪತ್ತೆ ಹಚ್ಚಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ನುಡಿದರು

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡಿ ಅಮೇರಿಕಾ ಮತ್ತು ರಷ್ಯಾ ದೇಶಗಳು ಭಾರತದೊಂದಿಗೆ ಮಾಡಿಕೊಂಡ ತಾಂತ್ರಿಕ ಒಪ್ಪಂದದಿಂದ ಹಿಂದೆ ಸರಿದಾಗ ಭಾರತೀಯ ವಿಜ್ಞಾನಿಗಳು ಎದೆಗುಂದದೆ ಸ್ವಂತ ಬಲದ ಮೇಲೆ ಚಂದ್ರಯಾನ -1 ಮತ್ತು ಚಂದ್ರಯಾನ -2 ಯಶಶ್ವಿಯಾಗಿ ಚಂದ್ರನ ಅಂಗಳಕ್ಕೆ ಕಳುಹಿಸಿದ್ದಾರೆ ಇಂತಹ ಸ್ಪರ್ಧಾತ್ಮಕ ಮನೋಭಾವನೆಗಳನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿಮಾಲಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಅನಂತ ಕುಲಕರ್ಣಿ ಮಾತನಾಡಿ ಆತ್ಮವಿಶ್ವಾಸ, ಛಲ ಇದ್ದರೆ ವಿದ್ಯಾರ್ಥಿಗಳು ಏನನ್ನು ಸಾಧಿಸಬಹುದು ಅದರ ಜೊತೆಗೆ ಗುರುಗಳ ಮಾರ್ಗದರ್ಶನ ಕೂಡ ಅತೀ ಮುಖ್ಯ ಎಂದು ನುಡಿದರು

ವೇದಿಕೆ ಮೇಲೆ ಶಿಕ್ಷಕರಾದ ಜಯಪ್ರಕಾಶ, ವಿಜಯಕುಮಾರ, ಧನರಾಜ, ಶಿವಕುಮಾರ ಕುಂಬಾರ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಆಯೋಜಿಸಿರುವ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.