ವಿಜ್ಞಾನ ಜೀವನದ ಒಂದು ಅಂಗವಾಗಿದೆ : ದಾಬಶೆಟ್ಟಿ

ಭಾಲ್ಕಿ:ಫೆ.25: ವಿಜ್ಞಾನ ನಮ್ಮ ನಿತ್ಯ ಜೀವನದ ಅಂಗವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಸೂರ್ಯೋದಯ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿಹಂತದಲ್ಲಿಯೂ ವೈಜ್ಞಾನಿಕವಾಗಿ ವಿಚಾರ ಮಾಡುತ್ತಾ ಅಭ್ಯಾಸ ಮಾಡಬೇಕು. ನಮ್ಮ ಆರೋಗ್ಯ ರಕ್ಷಣೆಯೂ ವಿಜ್ಞಾನದ ಒಂದು ಭಾಗವಾಗಿದೆ. ಹೀಗಾಗಿ ಉತ್ತಮವಾದ ಆರೋಗ್ಯದೊಂದಿಗೆ ಸತತ ಪ್ರಯತ್ನಪಟ್ಟು ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಮುಂದೆ ಬರಬೇಕು. ಕಲುಶಿತ ಆಹಾರಗಳನ್ನು ದೂರತಳ್ಳಿ, ಸಾತ್ವಿಕ ಆಹಾರ ಸೇವನೆ ಮಾಡಬೇಕು. ಓದಿದ ವಿಷಯ ಸದಾ ಮೆಲುಕು ಹಾಕುತ್ತಿರಬೇಕು ಅಂದಾಗ ಮಾತ್ರ ಅದು ನಮ್ಮ ನೆನಪಿನಲ್ಲಿ ಉಳಿಯುವುದು ಎಂದು ಹೇಳಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತೆ ಬಾಲಿಕಾ ಉಮಾಜಿ ಮಾತನಾಡಿ, ಸೂರ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕಸದಿಂದ ರಸ ತಯ್ಯಾರಿಸಿದ್ದಾರೆ. ಬೇಡವಾದ ಪದಾರ್ಥಗಳಿಂದ ಉತ್ತಮ ವಿಜ್ಞಾನ ಪರಿಕರಗಳನ್ನು ತಯ್ಯಾರಿಸಿ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಅನೀಲ ಪಾಟೀಲ ಪ್ರಾಸ್ತಾವಿವಕಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಉಷಾ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಅನುಜಾ ಹುಲಸೂರೆ ವಿಶೇಷ ಉಪನ್ಯಾಸ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಂಧ್ಯಾ ಕಾಮಾಜಿ, ವಿಜ್ಞಾನ ಶಿಕ್ಷಕ ಎಸ್.ಪಾಟೀಲ, ಶಿವಶಂಕರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಳೆಯದಾದ ವಸ್ತುಗಳನ್ನು ಬಳಸಿ ಉತ್ತಮವಾದ ವಿಜ್ಞಾನ ಪರಿಕರಗಳನ್ನು ತಯ್ಯಾರಿಸಿ, ವೈಜ್ಞಾನಿಕ ತತ್ವಗಳು ತಿಳಿಸುತ್ತಿರುವ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳು ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜ್ಞಾನ ಪರಿಕರಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.