ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ದೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಫೆ.15:  ತಾಲೂಕಿನ ಕರೂರು ಗ್ರಾಮದ ಅಗಸರ ದ್ಯಾವಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ದೆ ನಡೆಸಲಾಯಿತು.
ಸ್ಪರ್ದೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಅವರು ಚಿತ್ರಗಳನ್ನು ಬಿಡಿಸಿದರು. ವಿಜ್ಞಾನ ಶಿಕ್ಷಕರಾದ ನುಸ್ರತ್, ಲೋಕೇಶ್, ಶಾರದ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ಮಾರ್ಗದರ್ಶನ ನೀಡಿದರು.
ಮುಖ್ಯಗುರು ಭಾಗ್ಯಮ ಮಾತನಾಡಿ ನಮ್ಮ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಚಿತ್ರಗಳ ಸ್ಪರ್ದೆಯನ್ನು ಹಮ್ಮಿಕೊಂಡಿದ್ದು, 120 ವಿದ್ಯಾರ್ಥಿಗಳು ಒಟ್ಟಾಗಿ ಸೇರಿ 40 ಚಿತ್ರಗಳನ್ನು ಬಿಡಿಸಿದ್ದಾರೆಂದು ಹೇಳಿದರು.
ಶಿಕ್ಷಕರಾದ ಪ್ರತಿಮಾ, ದೇವಿಕಾ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದ್ದರು.