ವಿಜ್ಞಾನ ಕಲಿಕೆಗೆ ಉತ್ತೇಜನ

ಬೆಂಗಳೂರು,ಏ.೨೧- ಸಂಶೋಧನೆಯ ಮೂಲಕ ಶಾಲಾ ಮಟ್ಟದಲ್ಲಿ ವಿಜ್ಞಾನ ಕಲಿಕೆಯನ್ನು ಉತ್ತೇಜಿಸಲು ಒತ್ತು ನೀಡಲಾಗಿದೆ.
ಪ್ರಯೋಗ ಪ್ರಸ್ತುತ ಶಾಲಾ ಮಟ್ಟದ ವಿಜ್ಞಾನ ಕಲಿಕೆಯ ಮೇಲೆ ಕೇಂದ್ರೀಕರಿಸಿದ್ದು ಸಂಶೋಧನೆ, ಬೋಧನೆ ಮತ್ತು ಶಿಕ್ಷಕರ ತರಬೇತಿಗೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ಚಾಲನೆ ನೀಡಿ,
“ಪ್ರಗೋಗ’ ಪ್ರಗತಿಪರ ಶಾಲೆಗಳೊಂದಿಗೆ ಪಾಲುದಾರರಾಗಲು ನೋಡುತ್ತಿದ್ದಾರೆ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿಜ್ಞಾನ ಕಲಿಕೆ ಮತ್ತು ಪ್ರಯೋಗಾಲಯದ ಕನಸನ್ನು ನನಸಾಗಿಸಲು ಬಯಸುತ್ತಾರೆ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ
ವಿಶ್ವ ದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಹೊಂದಿರುವ ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್‌ನ ಹೊಸ ಕ್ಯಾಂಪಸ್ ಉದ್ಘಾಟನೆಯಾಗಿದೆ.ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಎಂ.ಎನ್. ವೆಂಕಟಾಚಲಯ್ಯ, ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಸಚಿವ ಸೋಮಶೇಖರ್,ಮತ್ತಿತರಿದ್ದರು