ವಿಜ್ಞಾನ ಎಜ್ಯುಕೇಷನಲ್ ಟ್ರಸ್ಟ್: ಕನ್ನಡ ರಾಜ್ಯೋತ್ಸವ ಆಚರಣೆ

ರಾಯಚೂರು.ನ.೨- ವಿಜ್ಞಾನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆದ್ದೂರಿಯಿಂದ ನಿನ್ನೆ ಆಚರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಅಶ್ವಿನಿ ಹಾಗೂ ವಿಜಯಲಕ್ಷ್ಮಿ, ಸಹ ಶಿಕ್ಷಕಿಯರು ನೆರವೇರಿಸಿದರು. ಕಾರ್ಯಕ್ರಮಕ್ಕೆ ಶಾಲೆಯ ಕಾರ್ಯದರ್ಶಿಗಳಾದ ಎಂ.ಸುರೇಶ ಬಾಬುರವರು ಹಾಗೂ ಸಿಬಿಎಸ್‌ಸಿ ಸಂಸ್ಥೆಯ ಛೇರ್‌ಮನ್‌ರಾದ ಡಾ.ಎಂ.ವರುಣ್ ಕುಮಾರ್ ಶಾಲೆಯ ಆಡಳಿತ ಅಧಿಕಾರಿಗಳಾದ ಗಂಗಮ್ಮ ಹಾಗೂ ಶಾಲೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯನಿಯರಾದ ಸಮೀನಾ ಬೇಗಂ ಹಾಗೂ ವಿನಯಾರವರು ಭಾಗವಸಿದ್ದು ಕಾರ್ಯಕ್ರಮವನ್ನು ಮೊದಲಿಗೆ ಕನ್ನಡಾಂಬೆಯಾದ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜಾಕಾರ್ಯಕ್ರಮವನ್ನು ನೆರವಿರಿಸಿ ನಂತರ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರ ಶಾಲೆಯಲ್ಲಿ ಕನ್ನಡ ವಿಷಯವನ್ನು ಭೋದಿಸುವ ಶಿಕ್ಷಕರಿಗೆ ಗೌರವ ನಮನಗಳನ್ನು ಸಲ್ಲಿಸಿದರು ವಿಶೇಷವಾಗಿ ಕನ್ನಡ ಶಿಕ್ಷಕರಿಗೆ ಕರ್ನಾಟಕ ಧ್ವಜ ಹಳದಿ ಮತ್ತು ಕೆಂಪು ಬಣ್ಣದಶಾಲಿನ ಮುಖಾಂತರ ಅವರಿಗೆ ನಮನಗಳನ್ನು ಸಲ್ಲಿಸಿದರು. ನಂತರ ಕನ್ನಡ ರಾಜ್ಯೋತ್ಸವದ ಕುರಿತು ಕನ್ನಡ ಶಿಕ್ಷಕಿಯಾದ ಜಯಶ್ರೀ ರವರು ಕನ್ನಡನಾಡು, ನುಡಿ, ಹಸಿರಿನ ಬಗ್ಗೆ ಮಹತ್ವವನ್ನು ತಿಳಿಸಿದರು.
ಅದೇ ರೀತಿಯಾಗಿ ಕನ್ನಡ ಶಿಕ್ಷಕರಾದ ವಿರೇಶ ರವರು ಕರ್ನಾಟಕ ರಚನೆ ಹಾಗೂ ಏಕೀಕರಣದ ಬಗ್ಗೆ ಮಾತನಾಡಿದರು ಮತ್ತು ರೇಣುಕಾ ರವರು ಕನ್ನಡ ವೈಶಿಷ್ಟ್ಯತೆಯನ್ನು ಕುರಿತು ಮಾತನಾಡಿದರು. ನಂತರದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಎಂ.ಸುರೇಶಬಾಬುರವರು ಕನ್ನಡ ಕರ್ನಾಟಕದ ಉದಯದ ಬಗ್ಗೆ ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿದರು ಅದೇರೀತಿಯ ಕನ್ನಡ ಮಾಧ್ಯದಮದ ಮುಖ್ಯಗುರುಗಳಾದ ವಿನಯಾರವರು ಮೈಸೂರು ಸಂಸ್ಥಾನವನ್ನು ಬ್ರಿಟೀಷರ ಆಳ್ವಿಕೆಯಿಂದ ಅದನ್ನು ಹೇಗೆ ಮುಕ್ತಿಗೊಳಿಸಲಾಯಿತು ಎಂದು ತಿಳಿಸಿಕೊಟ್ಟರು.
ಅದೇ ರೀತಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ, ಕರ್ನಾಟಕ ರಾಜ್ಯೋತ್ಸವ ಕುರಿತು ಬಹಳ ಉತ್ತಮವಾಗಿ ಮಾತನಾಡಿದರು. ಕೊನೆಯದಾಗಿ ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡಕ್ಕೆ ಸಂಬಂಧಿಸಿದಂತೆ ಕೆಲವೊಂದು ಕನ್ನಡ ಗಾಯನಗಳ ನೃತ್ಯಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ರಾಮಯ್ಯ ನೆರವೆರಿಸಿದರು.