ವಿಜ್ಞಾನಿಗಳ ಕೊಡುಗೆ ಸಮಾಜಕ್ಕೆ ಪರಿಚಯಿಸುವ ಕಾರ್ಯವಾಗಲಿ

ಕಲಬುರಗಿ.ನ.7: ಜ್ಯೋತಿ ತನ್ನನ್ನು ತಾನು ಬೆಂದು ಬೆಳಕು ನೀಡುವಂತೆ, ಅನೇಕ ವಿಜ್ಞಾನಿಗಳ ನಾವಿಂದು ಕಾಣುವ ಅಸಂಖ್ಯಾತ ವಸ್ತುಗಳ ಸಂಶೋಧನೆಗಳಿಗಾಗಿ ತಮ್ಮ ಜೀವವನ್ನೇ ನೀಡಿದ್ದಾರೆ. ಅವರೆಲ್ಲರನ್ನು ಸ್ಮರಸುವುದು ಪ್ರತಿಯೊಬ್ಬರ ಕರ್ತವ್ಯ. ವಿಜ್ಞಾನಿಗಳ ಜೀವನ, ಸಾಧನೆ, ಕೊಡುಗೆಯನ್ನು ಸಮಾಜಕ್ಕೆ ಪರಿಚಯಿಸಿ, ಎಲ್ಲರಲ್ಲಿ ವೈಜ್ಞಾನಿಕ ಮನೋಭಾವ ಮೈಗೂಡುವಂತೆ ಮಾಡುವ ಕಾರ್ಯ ಪ್ರಸ್ತುತವಾಗಿ ಜರುಗಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆಯೆಂದು ರಾಜ್ಯ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಷ್ಕøತ ಚಂದ್ರಶೇಖರ ಪಾಟೀಲ ಸದಾಶಯ ವ್ಯಕ್ತಪಡಿಸಿದರು.
ಅವರು ನಗರದ ಆಳಂದ ರಸ್ತೆಯ ಇಂಡೋ-ಕಿಡ್ಜ್ ಪ್ಲೇ ಹೋಮ್ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ರಾಜ್ಯ ವಿಜ್ಞಾನ ಪರಿಷತ್’ನ ಜಿಲ್ಲಾ ಘಟಕ ಇವುಗಳ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೋಬೆಲ್ ಪ್ರಶಸ್ತಿ ಪುರಷ್ಕøತ ಮಹಾನ ವಿಜ್ಞಾನಿಗಳಾದ ಸರ್.ಸಿ.ವಿ.ರಾಮನ್, ಮೇಡಂ ಕ್ಯೂರಿ ಅವರ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಜ್ಞಾನಿಗಳ ಸಾಧನೆಯ ಬಗ್ಗೆ ವ್ಯಾಪಕವಾದ ಅರಿವಿನ ಕೊರತೆಗೆ ತೀರ್ವ ವಿಷಾದ ವ್ಯಕ್ತಪಡಿಸಿದ ಅವರು, ನಾವಿಂದೂ ಎಲ್ಲಾ ಸೌಕರ್ಯಗಳನ್ನು ಪಡೆದು ಉತ್ತಮ ಜೀವನ ಸಾಗಿಸುತ್ತಿರುವುದಕ್ಕೆ ವಿಜ್ಞಾನಿಗಳು ಮಾಡಿದ ತ್ಯಾಗವನ್ನು ಮರೆಯಬಾರದು. ವಿಜ್ಞಾನ ಕ್ಷೇತ್ರದಲ್ಲಿ ‘ಬೆಳಕು’ ಮೂಡಿಸುವ ಮೂಲಕ ಸರ್.ಸಿ.ವಿ.ರಾಮನ್ ಇಡೀ ವಿಶ್ವವೇ ಭಾರತದಡೆಗೆ ತಿರುಗಿ ನೋಡುವ ಅದ್ಭುತ ಸಾಧನೆ ಮಾಡಿದ್ದಾರೆ. ಇಡೀ ಏಷ್ಯಾ ಖಂಡದಲ್ಲಿಯೇ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗುವ ಮೂಲಕ ನಮ್ಮ ದೇಶದ ಕೀರ್ತಿಯನ್ನು ಪಸರಿಸಿದ್ದಾರೆ. ವಿಜ್ಞಾನ ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಮಾಡಬೇಕಾಗಿದೆಯೆಂದರು.
ವಿಜ್ಞಾನ ಶಿಕ್ಷಕ ಪಂಕಜ ಪಾಟೀಲ ಮಾತನಾಡುತ್ತಾ, ಸಮುದ್ರದ ನೀಲಿ ಬಣ್ಣಕ್ಕೆ ಬೆಳಕಿನ ಚದುರುವಿಕೆಯ ಕಾರಣವೆಂಬ ಸಂಶೋಧನೆ ‘ರಾಮನ್ ಪರಿಣಾಮ’ ಅದ್ಭುತವಾದದ್ದು. ಇತ್ತೀಚಿನ ದಿವಸಗಳಲ್ಲಿ ಮಾನವನಿಗೆ ಬಹು ಕಾಡುತ್ತಿರುವ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖವಾದ ಧಾತುವಾದ ರೇಡಿಯಂನ್ನು ಸಂಶೋಧಿಸಿ, ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವವನ್ನೇ ನೀಡಿದ ನೋಬೆಲ್ ಪ್ರಶಸ್ತಿ ಪುರಸ್ಕøತ ಖ್ಯಾತ ವಿಜ್ಞಾನಿ ಮೇಡಂ ಕ್ಯೂರಿ ಮನುಕುಲಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿರುವುದು ಮಾನವಕುಲವೆಂದು ಮರೆಯುವಂತಿಲ್ಲವೆಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಕೆ.ಬಸವರಾಜ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ಶಿವಶರಣ ಉದನೂರ, ವಿಠಲ ಕುಂಬಾರ, ಅಣ್ಣಾರಾವ ಬಿರಾದಾರ,ಪ್ರಕಾಶ ಸರಸಂಬಿ ಸೇರಿದಂತೆ ಮತ್ತಿತರರಿದ್ದರು.