ವಿಜ್ಞಾನಿಗಳ ಅವಿರತ ಶ್ರಮಕ್ಕೆ ಸಿಕ್ಕ ಫಲ

ಧಾರವಾಡ,ಆ24: ಚಂದ್ರನ ದಕ್ಷಿಣ ದ್ರುವದ ಮೇಲೆ ಇಸ್ರೊದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದ್ದು ಅತ್ಯಂತ ಹೆಮ್ಮೆಯ ವಿಷಯ. ಚಂದ್ರಯಾನ-2 ವಿಫಲವಾದರೂ ಚಂದ್ರಯಾನ-3 ಯೋಜನೆ ಹಾಕಿಕೊಂಡು ಯಶಸ್ವಿಯಾಗಿರುವ ಇಸ್ರೊ ಜಗತ್ತಿನ ಎದುರು ತಾನೇನು ಎಂದು ಸಾಬೀತುಪಡಿಸಿದೆ. ಪ್ರಗ್ಯಾನ್ ರೋವರ್ ಮೂಲಕ ಇಸ್ರೊ ಚಂದ್ರನ ಕುರಿತು ಹೆಚ್ಚು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡು ಮನುಕುಲಕ್ಕೆ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಕೆಪಿಸಿಸಿ ವಕ್ತಾರ ಪಿ.ಎಚ್. ನೀರಲಕೇರಿ ಹೇಳಿದ್ದಾರೆ.