ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ

ಲಕ್ಷ್ಮೇಶ್ವರ,ಮಾ16: ಪಟ್ಟಣದ ಚಂದನ ಶಾಲೆಯಲ್ಲಿ ಸೋಮವಾರ ಧಾರವಾಡದ ಅಂತರಿಕ್ಷ ವಿಜ್ಞಾನಿ ಡಾ.ಎಸ್.ಎಸ್.ದೇಸಾಯಿ ಹಾಗೂ ಕ್ರೀಷ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರಜ್ಞ ಜಾವೇದ ಇಕ್ಬಾಲ್ ಮುಲ್ಲಾ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳು ಅಂತರಿಕ್ಷ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂಶಯ ನಿವಾರಣೆ ಮಾಡಿಕೊಂಡರು. ಶಾಲೆಯ ಸಂಸ್ಥಾಪಕ ಟಿ.ಈಶ್ವರ. ಎಚ್.ಸಿ.ರಟಗೇರಿ, ಮುಖ್ಯೋಪಾಧ್ಯಾಯ ಆರ್.ಜಿ.ಬಾವಾನವರ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.