ವಿಜ್ಞಾನಿಗಳಿಗೆ ಮಮತಾ ಅಭಿನಂದನೆ

ಕೋಲ್ಕತ್ತಾ ,ಆ.೨೪- ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-೩ ಲ್ಯಾಂಡರ್ ಮಾಡ್ಯೂಲ್ ಯಶಸ್ವಿಯಾಗಿ ಇಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಂಡಿದ್ದಾರೆ.

ಭಾರತ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-೩ ಲ್ಯಾಂಡರ್ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಮಮತಾ ಬ್ಯಾನರ್ಜಿ ಹರ್ಷ ವ್ಯಕ್ತಪಡಿಸಿ ಜೈ ಹಿಂದ್, ಇಸ್ರೋ ವಿಜ್ಞಾನಿಗಳಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ರಾಷ್ಟ್ರದ ಅದ್ಭುತ ಸಾಧನೆಗೆ ನಮಸ್ಕಾರ. ನಮ್ಮ ವಿಜ್ಞಾನಿಗಳು ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಾಕ್ಷಿಯಾಗಿದ್ದಾರೆ. ಭಾರತ ಈಗ ಸೂಪರ್ ಆಗಿದೆ. ಹೆಮ್ಮೆಯ ವಾಸ್ತುಶಿಲ್ಪಿಗಳಿಗೆ,ವಿಜ್ಞಾನಿಗಳಿಗೆ ನಮನಗಳು ಎಂದು ಅಭಿನಂಧನೆ ಸಲ್ಲಿಸಿದ್ದಾರೆ.

ರಾಜ್ಯಪಾಲರ ಮೆಚ್ಚುಗೆ:

ಭಾರತೀಯ ಮನಸ್ಸಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಹೇಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-೩ ಲ್ಯಾಂಡರ್ ಮಾಡ್ಯೂಲ್ ಇಳಿಸುವ ಈ ಅಸಾಧ್ಯ ಕಾರ್ಯಾಚರಣೆಯನ್ನು ಸಾಧಿಸಿದ್ದಕ್ಕಾಗಿ ಅವರು ಇಡೀ ರಾಷ್ಟ್ರ ಮತ್ತು ಇಸ್ರೋ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ

ಭಾರತ ಗೆಲ್ಲುತ್ತದೆ, ಮತ್ತು ಅದು ಇತರರನ್ನು ಗೆಲ್ಲುವಂತೆ ಮಾಡುತ್ತದೆ. ಭಾರತೀಯ ಮನಸ್ಸಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ವಿಜ್ಞಾನಿಗಳಾದ ’ಝಾಂಡಾ ಊಂಚಾ ರಹೇ ಹಮಾರಾ’ ಮತ್ತು ’ಮೇರಾ ಭಾರತ್ ಮಹಾನ್’ ಮೂಲಕ ಭಾರತ ಇದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ

ಇಸ್ರೋ ಸಾಧನೆ ಕೊಂಡಾಡಲು ಮತ್ತು ಯುವ ಪ್ರತಿಭೆಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಆಕರ್ಷಿಸಲು ಪಶ್ಚಿಮ ಬಂಗಾಳ ರಾಜ್ಯಪಾಲರು ಪಶ್ಚಿಮ ಬಂಗಾಳ ಮತ್ತು ಕೇರಳದ ಅತ್ಯುತ್ತಮ ವಿಜ್ಞಾನ/ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ತಲಾ ೧ ಲಕ್ಷ ರೂಪಾಯಿ ಚಂದ್ರಯಾನ ಪ್ರಶಸ್ತಿ ಘೋಷಿಸಿದ್ದಾರೆ.