
ಕಲಬುರಗಿ,ಮಾ 15: ತಾಲೂಕಿನ ಖಣದಾಳ ಗ್ರಾಮದ ಸರಕಾರಿ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕರನ್ನು ನೇಮಿಸುವಂತೆ ನಂದಿಕೂರ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಪವನಕುಮಾರ ಬಿ ವಳಕೇರಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಸುಮಾರು 3 ತಿಂಗಳು ಹಿಂದೆ ಇಲ್ಲಿದ್ದ ವಿಜ್ಞಾನ ಶಿಕ್ಷಕರನ್ನು ಅಮಾನತ್ತುಗೊಳಿಸಲಾಗಿದೆ.ಆದರೆ ಅವರ ಸ್ಥಾನಕ್ಕೆ ಬೇರೆ ಶಿಕ್ಷಕರ ನಿಯೋಜನೆ ಮಾಡಿಲ್ಲ.ಮುಖ್ಯಗುರುಗಳು ವಿಜ್ಞಾನ ವಿಷಯ ಬೋಧಿಸುತ್ತಿದ್ದು,ಅವರ ಕಾರ್ಯಕಲಾಪಗಳ ಒತ್ತಡದಿಂದ ವಿಷಯ ಬೋಧನೆಗೆ ತೊಂದರೆಯಾಗುತ್ತಿದೆ.ಮಾರ್ಚ 31 ಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ .ಆದ್ದರಿಂದ ವಿಜ್ಞಾನ ಶಿಕ್ಷಕರ ನೇಮಕಕ್ಕಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಲ್ಲಣ್ಣಗೌಡ ನಂದಿಕೂರ,ಸಂಗಣ್ಣಗೌಡ ಸೀತನೂರ,ಅನ್ವರ್ ಪಟೇಲ್ ಮಾಲಿ ಪಾಟೀಲ,ಶಿವಶರಣಪ್ಪ ಸುಬೇದಾರ ಉಪಸ್ಥಿತರಿದ್ದರು.