ವಿಜ್ಞಾನವು ವೈಚಾರಿಕತೆಗೆ ಬುನಾದಿ

ಬೀದರ:ಮಾ.1:ಧರ್ಮ ದೇವರ ಹೆಸರಿನಲ್ಲಿ ಮೌಢ್ಯಾಚರಣೆಗಳು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಂದು ಮಗುವಿನಲ್ಲಿಯೂ ವೈಜ್ಞಾನಿಕ ಮನೋಭಾವ ಬೆಳೆಸುವುದು ಅವಶ್ಯಕವಾಗಿದೆ. ಸಮಾಜದಲ್ಲಿ ಇನ್ನೂ ಅಡಗಿರುವ ಮೌಢ್ಯತೆ ಹೋಗಲಾಡಿಸಲು, ವೈಚಾರಿಕ ಮನೋಭಾವ ಬೆಳೆಸಲು ವಿಜ್ಞಾನವು ಅವಶ್ಯಕವಾಗಿದೆ ಸಮಗ್ರ ಶಿಕ್ಷಣ ಕರ್ನಾಟಕ ಉಪಯೋಜನಾಧಿಕಾರಿ, ವಿಷಯ ಪರೀಕ್ಷಕ ಗುಂಡಪ್ಪ ಹುಡುಗೆ ಅಭಿಪ್ರಾಯಪಟ್ಟರು.
ಮಹಾತ್ಮ ಬೊಮ್ಮಗೊಂಡೆಶ್ವರ ಶಿಕ್ಷಣ ಸಂಸ್ಥೆಯ ಮಹಾತ್ಮ ಬೊಮ್ಮಗೊಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಾಮಸ್ವಾಮಿ ಪೆರಿಯಾರ್ ಪ್ರೌಢಶಾಲಾ ಅವರಣದಲ್ಲಿ ದಿ. 28.02.2024ರಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಕುಮದಾ ನೀಲಾ ಮಾತನಾಡಿ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೇ ಭಾರತೀಯ ವಿಜ್ಞಾನಿಗಳ ಸಂಶೋಧನೆಗೆ ಮಹತ್ವದ ಸ್ಥಾನವಿದ್ದು, ಅವರು ಗೈದಿರುವ ಹಲವಾರು ಸಂಶೋಧನೆಗಳಿಗೆ ಜಾಗತಿಕ ಮಟ್ಟದಲ್ಲಿ ಪೆಟೆಂಟ್ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು.
ಶಾಲಾ ಹಂತದಲ್ಲಿ ಆಯೋಜಿಸಲ್ಪಡುವ ಕಲಿಕಾ ಬೋಧನೋಪಕರಣಗಳ ಪ್ರಾತ್ಯಕ್ಷಿಕೆ, ಚಟುವಟಿಕೆ ಆಧಾರಿತ ಕಲಿಕೆಯು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮವನ್ನುಂಟು ಮಾಡುತ್ತÀ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ರಘುನಾಥ ತಿಳಿಸಿದರು.
ಸಿವಿ ರಾಮನ್‍ರವರ ಭಾವಚಿತ್ರಕ್ಕೆ ಪೂಜಾ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರತಿಜ್ಞಾವಿಧಿ ಓದಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮೃತರಾವ್ ಚಿಮಕೋಡೆಯವರು ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಈ ವಿಜ್ಞಾನ ವಸ್ತು ಪ್ರದರ್ಶನವು ದಾರಿದೀಪವಾಗುತ್ತದೆ. ಎಲ್ಲಾ ಮಕ್ಕಳು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಂಡು ಮೌಢ್ಯತೆಯನ್ನು ಹೋಗಲಾಡಿಸುತ್ತ ಶ್ರೇಷ್ಠ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಮಾನವನ ಜೀರ್ಣಾಂಗ ವ್ಯೂಹ, ಮಾನವನ ಹೃದಯದ ರಕ್ತ ಪರಿಚಲನೆ, ಕಿಡ್ನಿ ರಚನೆ, ಆಮ್ಲ ಮಳೆ, ಸೋಲಾರ್ ಎನರ್ಜಿ, ವಾಯುಮಾಲಿನ್ಯ, ಜ್ವಾಲಾಮುಖಿ, ಎಟಿಎಂ, ವಾಟರ್ ಸೈಕಲ್, ಚಂದ್ರಯಾನ-3, ಲ್ಯಾಂಡ್ ರೋವರ್, ಹೋಲೊ ಗ್ರಾಮ್, ಸ್ಪೀಡ್ ಬ್ರೇಕರ್, ಸೋಲಾರ್ ಸಿಸ್ಟಮ್, ತಾಜ್‍ಮಹಲ್, ಇಂಡಿಯ ಗೇಟ್, ಪಲ್ಸಸ್, ಕೆಂಪುಕೋಟೆ, ನೀರಿನ ಶುದ್ಧೀಕರಣ ಸೇರಿದಂತೆ 150ಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳನ್ನು, ಕಲಿಕಾ ಚಟುವಟಿಕೆಗಳ ನಮೂನೆಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸಿ ಪ್ರದರ್ಶಿಸಿದರು. ವಿಜ್ಞಾನದ ಜೊತೆಗೆ ಕನ್ನಡ, ಸಮಾಜವಿಜ್ಞಾನ, ಇಗ್ಲಿಂಷ್ ವಿಷಯದ ಕಲಿಕಾ ಬೋಧನೋಪಕರಣಗಳನ್ನು ವಿದ್ಯಾರ್ಥಿಗಳೆ ತಯಾರಿಸಿಕೊಂಡು ವಿವರಿಸಿದ್ದು ಕಂಡುಬಂದಿತು.
ಮುಖ್ಯಗುರು ಸಿದ್ರಾಮ ನಿಜಾಂಪುರ ಸ್ವಾಗತ ಕೋರಿ ಪ್ರಸ್ತಾವಿಕ ಮಾತನಾಡಿದರು. ಶರಣಪ್ಪ ನಿರೂಪಿಸಿದರೆ ರಾಜಣ್ಣ ವಂದಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಶರಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋμï ಶಂಭು, ರವಿ ಡುಂಬಾಳೆ, ಅಂಬರೀಶ ವಡಗೈ, ಶೋಭಾರಾಣಿ, ವಿವಿಧ ಶಾಲೆಯ ಮುಖ್ಯಗುರುಗಳಾದ ರಾಮಶೆಟ್ಟಿ ಜಾಧವ, ಗೌತಮ ವರ್ಮಾ, ಇಲೇಶಕುಮಾರ, ಸುಲೋಚನಾ, ಚಂಚಲಾ, ಅನಂತ ಕುಲಕರ್ಣಿ, ಶಾಂತಕುಮಾರ, ಖುಬು ಪವಾರ, ಜಯಾಪ್ರಿಯ, ರಾಜಣ್ಣ ಶಂಭು, ಬೋರ್ಗೊಂಡ, ಸಕಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.