ವಿಜ್ಞಾನವನ್ನು ತಪಸ್ಸಿನಂತೆ ಅಧ್ಯಯನ ಮಾಡಿ : ಡಾ. ಪಿ. ರಘೋತ್ತಮರಾವ್

ಕಲಬುರಗಿ:ಜ.17: ಜಗತ್ತಿನ ಆಗುಹೋಗುಗಳ ಜ್ಞಾನವನ್ನುಕ್ಷಣಮಾತ್ರದಲ್ಲೇಒದಗಿಸುವ ಸೌಕರ್ಯಇಂದುಜಗತ್ತಿಗೆದೊರೆತದ್ದುವಿಜ್ಞಾನದ ಪ್ರಗತಿಯಿಂದ. ವಿಜ್ಞಾನದ ವಿಸ್ಮಯಕಾರಿಕುತೂಹಲಕರ ಸಂಗತಿಗಳನ್ನು ತಪಸ್ಸಿನಂತೆ ಅಧ್ಯಯನ ಮಾಡಿದಾಗ ಮಾತ್ರ ಭವಿಷ್ಯದ ವಿಜ್ಞಾನಿಗಳಾಗಲು ಸಾಧ್ಯಎಂದುರಕ್ಷಣಾ ಸಂಶೋಧನಾ ಮತ್ತುಅಭಿವೃದ್ಧಿ ಸಂಸ್ಥೆಡಿ.ಆರ್.ಡಿ.ಒ.ದ ನಿವೃತ್ತ ವಿಜ್ಞಾನಿ ಡಾ. ಪಿ. ರಘೋತ್ತಮರಾವ್ ಅಭಿಪ್ರಾಯಪಟ್ಟರು. ಅವರುಇಂದು ನಗರದ ಹೊರವಲಯದ ಕಣದಾಳದ ಶ್ರೀಗುರು ವಿದ್ಯಾಪೀಠದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಖಿಲ ಕರ್ನಾಟಕ 30ನೇ ರಾಷ್ಟ್ರೀಯಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಷಿ ಮಾತನಾಡಿಜೀವ ಪರಿಸರಅಧ್ಯಯನ ಇಂದಿನ ಅನಿವಾರ್ಯತೆಯಾಗಿದೆ.ಪರಿಸರ ಸಮತೋಲನತೆಯಿಂದಕೂಡಿದಾಗ ಮಾತ್ರ ಸುಸ್ಥಿರ ಅಭಿವೃದ್ದಿ ಸಾಧ್ಯ.ಇಲ್ಲಿ ಭಾಗವಹಿಸಿರುವ ಬಾಲ ವಿಜ್ಞಾನಿಗಳು ಇದೇ ವಿಷಯದಕುರಿತುಯೋಜನೆ ತಯಾರಿಸಿರುವುದು ಸಂತೋಷದ ಸಂಗತಿಎಂದರು.
ಇನ್ನೋರ್ವ ಅತಿಥಿ ಶ್ರೀ ಶರಣಮ್ಮ ದಿಗ್ಗಾವಿ ಶಿಕ್ಷಣ ಸಂಸ್ಥೆಯಮುಖ್ಯಸ್ಥ ಬಸವರಾಜ ದಿಗ್ಗಾವಿ ಮಾತನಾಡಿಇಲ್ಲಿಂದಆಯ್ಕೆಗೊಂಡುರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗೊಳಿಸುವ ಕರ್ನಾಟಕದ ಬಾಲವಿಜ್ಞಾನಿಗೆ ರೂ.1.00 ಲಕ್ಷ ನಗದು ಬಹುಮಾನ ನೀಡುವುದರೊಂದಿಗೆ ನೂತನ ಸಭಾಗೃಹ ಆ ಬಾಲವಿಜ್ಞಾನಿ ಕೈಯಿಂದಲೇ ಉದ್ಘಾಟಿಸಿ ಅವರನ್ನುಅವರ ಮಾರ್ಗದರ್ಶಿ ಶಿಕ್ಷಕರನ್ನು ಸನ್ಮಾನಿಸುವುದಾಗಿ ಘೋಷಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಮ್ ವೈ ಪಾಟೀಲ ಮಾತನಾಡಿ ಮೂಢನಂಬಿಕೆಗಳನ್ನು ತ್ಯಜಿಸಿ ವೈಜ್ಞಾನಿಕ ಮನೋಭಾವ ಹೊಂದುವುದು ಪ್ರತಿಯೊಬ್ಬ ನಾಗರಿಕನಜವಾಬ್ದಾರಿಯಾಗಿದೆ.ಇಂದಿನ ವಿದ್ಯಾರ್ಥಿಗಳು ಬಾಲ್ಯದಿಂಲೇ ವೈಜ್ಞಾನಿಕ ತಳಹದಿಯ ಮೇಲೆ ಸಮಾಜಕಟ್ಟುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ ಎಳೆಯ ವಯಸ್ಸಿನಲ್ಲಿಯೇ ರಾಜ್ಯದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ಹಾಗು ಅವರನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವ ಉದ್ದೇಶದಿಂದ ವಿಜ್ಞಾನ ಪರಿಷತ್ತು ಮಕ್ಕಳ ವಿಜ್ಞಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಇಲ್ಲಿ ಆಯ್ಕೆಗೊಳ್ಳುವ ಬಾಲವಿಜ್ಞಾನಿಗಳು ರಾಷ್ಟ್ರಮಟ್ಟದಲ್ಲಿಕರ್ನಾಟಕದಕೀರ್ತಿತರುವಂತವರಾಗಲಿ ಎಂದರು.
ವೇದಿಕೆಯ ಮೇಲೆ ವಿಧಾನ ಪರಿಷತ್ತಿನ ಸದಸ್ಯಡಾ. ಬಿ. ಜಿ. ಪಾಟೀಲ, ರಾಜ್ಯ ವಿಜ್ಞಾನ ಪರಿಷತ್ತಿನಉಪಾಧ್ಯಕ್ಷರಾದ ಬಿ. ದೊಡ್ಡಬಸಪ್ಪ, ಸಹಕಾರ್ಯದರ್ಶಿ ಬಿ. ಎನ್. ಶ್ರೀನಾಥ್, ಖಜಾಂಚಿಎಚ್.ಎಸ್.ಟಿ. ಸ್ವಾಮಿ,ಕಾರ್ಯಕಾರಿ ಸಮಿತಿ ಸದಸ್ಯರಾದಅಣದೂರು ಮಹಾರುದ್ರಪ್ಪ, ಜಗನಾಥ ಹಲಮಡಗಿ, ಬಸವಲಿಂಗಪ್ಪ ಮಲ್ಹಾರ, ಮೀನಾಕ್ಷಿ ಕುಡಸೋಮಣ್ಣವರ ಉಪಸ್ಥಿತರಿದ್ದರು. ರಾಜ್ಯ ಸಂಯೋಜಕಡಾ. ಕುಂಟೆಪ್ಪಗೌರಿಪೂರ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್.ಜಿ. ಹುದ್ದಾರ ವಂದಿಸಿದರು. ಸಮಾವೇಶದಲಿ ್ಲರಾಜ್ಯದ 30 ಜಿಲ್ಲೆಗಳಿಂದ ಆಯ್ದ 300 ಯೋಜನೆಗಳ 600 ಬಾಲ ವಿಜ್ಞಾನಿಗಳು ಅವರ ಮಾರ್ಗದರ್ಶಿ ಶಿಕ್ಷಕರೊಂದಿಗೆ ಭಾಗವಹಿಸಿದ್ದರು.