
ಇಂಡಿ: ಮಾ.1:ವಿಜ್ಞಾನವು ಮನುಷ್ಯನ ಜೀವನದ ಅವಿಭಾಜ್ಯ ಅಂಗ.?ದಿನನಿತ್ಯದ ಜೀವನದಲ್ಲಿ ವಿಜ್ಞಾನ?ಹಾಸುಹೊಕ್ಕಾಗಿದೆ
ಗ್ರಾಮೀಣ ಜನರಿಗೂ ವಿಜ್ಞಾನದ ಅರಿವು ಮೂಡಿಸಬೇಕು. ಮಕ್ಕಳು ವಿಜ್ಞಾನವನ್ನು ಜೀವನದ ಹವ್ಯಾಸವಾಗಿ ಪರಿಗಣಿಸಬೇಕು ಎಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಜನಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ.ವಿಜ್ಞಾನದ ಮಹತ್ವವನ್ನು ಅರಿತಾಗಲೇ, ಅದರ ಪರಿಣಾಮ ಏನು ಎಂದು ತಿಳಿಯಲು ಸಾಧ್ಯ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ,ವಿಜ್ಞಾನ ಕೇವಲ ಪ್ರಯೋಗ ಶಾಲೆಯಲ್ಲ. ಅದೊಂದು ಸಂಶೋಧನೆ, ಸಮೀಕ್ಷೆ, ವಿಶೇಷವಾದ ಜ್ಞಾನ.ಕೇವಲ ಪ್ರಯೋಗಗಳಿಂದ ವಿಜ್ಞಾನ ಅರ್ಥಪೂರ್ಣವಾಗಲಾರದು.?ವಿಷಯದ ಮೇಲೆ ಸಂಶೋಧನೆ, ಸಮೀಕ್ಷೆ, ಪ್ರಶ್ನೋತ್ತರ, ಚರ್ಚೆ ನಿರಂತರವಾಗಿ ಆಗಬೇಕು.ಆಗ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಹಿರೇರೂಗಿ ಕನ್ನಡ ಕ್ಲಸ್ಟರ್ ಸಿ ಆರ್ ಪಿ ಸಂತೋಷ ಚವ್ಹಾಣ ಮಾತನಾಡಿ,ವಿಜ್ಞಾನದ ಸಹಾಯದಿಂದ ಮಾನವರು ಅನೇಕ ಸಂಶೋಧನೆಗಳನ್ನು ಮಾಡುವ ಮೂಲಕ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಂಡಿದ್ದನ್ನು ಕಾಣಬಹುದು ಎಂದು ಹೇಳಿದರು.
ಕೆಬಿಎಸ್ ಶಾಲಾ ಮುಖ್ಯ ಶಿಕ್ಷಕರಾದ ಅನಿಲ ಪತಂಗಿ,
ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ, ಶಿಕ್ಷಕರಾದ ಎಸ್ ಎಸ್ ಅರಬ,ಎಸ್ ಎಚ್ ಮೈದರಗಿ,ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಡಿಎಡ್ ವಿದ್ಯಾರ್ಥಿನಿ ತೈಸೀನ್ ನದಾಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಾಲಾ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.