ವಿಜ್ಞಾನದಲ್ಲಿ ತಾಲೂಕಿಗೆ ಪ್ರಥಮ : ಅಲ್ತಾಫ್, ದ್ವೀತಿಯ ವೀರೇಶ್,ವಿವಿಧ ಕಾಲೇಜುಗಳ ಪಿ.ಯು ಫಲಿತಾಂಶ


ಸಂಜೆವಾಣಿ ವಾರ್ತೆ
ಹರಪನಹಳ್ಳಿ  ಏ.11; ದ್ವಿತೀಯ ಪಿ.ಯು ಪಲಿತಾಂಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಹಾಗೂ ದ್ವೀತಿಯ ಸ್ಥಾನವನ್ನು ಭಂಗಿ ಬಸಪ್ಪ ಪಿಯು ವಿಜ್ಞಾನ ಕಾಲೇಜು ಪಡೆದುಕೊಂಡಿದೆ.
ಪಟ್ಟಣದ ಭಂಗಿ ಬಸಪ್ಪ ವಿಜ್ಞಾನ ಪಿಯು ಕಾಲೇಜು ವಿದ್ಯಾರ್ಥಿ ಅಲ್ತಾಫ್ 600ಕ್ಕೆ 563 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ದ್ವೀತಿಯ ಸ್ಥಾನದಲ್ಲಿ ವೀರೇಶ್ ವಿದ್ಯಾರ್ಥಿ 600ಕ್ಕೆ 561 ಅಂಕ ಪಡೆದುಕೊಂಡಿದ್ದಾರೆ.
ತಾಲೂಕಿನ ವಿವಿಧ ಕಾಲೇಜುಗಳ ಫಲಿತಾಂಶ: ಪಟ್ಟಣದ ವೀರಶೈವ ವಿದ್ಯಾವರ್ದಕ ಸಂಘದ ಎಸ್‍ಎಸ್‍ಎಚ್‍ಜೈನ್ ಕಾಲೇಜಿಗೆ ಶೇ.66.97 ಪಲಿತಾಂಶ ಬಂದಿದ್ದು, ವಿಜ್ಞಾನ ವಿಬಾಗದಲ್ಲಿ ಉನ್ನತ ಶ್ರೇಣಿ -14 ಪ್ರಥಮ -74, ದ್ವಿತೀಯ -26, ತೃತೀಯ -2 ಹೀಗೆ 61.05, ಕಲಾ ವಿಭಾಗದಲ್ಲಿ ಉನ್ನತ ಶ್ರೇಣಿ -6, ಪ್ರಥಮ -16, ದ್ವಿತೀಯ -5ತೃತೀಯ-1, ಶೇ.82.35, ಶಿಕ್ಷಣ ವಿಭಾಗ ದಲ್ಲಿ ಉನ್ನತ ಶ್ರೇಣಿ -41, ಪ್ರಥಮ -49, ದ್ವಿತೀಯ -15, ತೃತೀಯ -17 ಶೇ.84.72 ಪಲಿತಾಂಶ ವಿದೆ. ವಾಣಿಜ್ಯ ವಿಭಾಗದಲ್ಲಿ ಉನ್ನತಶ್ರೇಣಿ -5, ಪ್ರಥಮ -12, ದ್ವಿತೀಯ -2, ತೃತೀಯ -1 ಶೇ.36.00 ಪಲಿತಾಂಶವಿದೆ. ಒಟ್ಟಾರೆ ಪಲಿತಾಂಶ ಶೇ. 66.97 ಬಂದಿದೆ ಎಂದು ಪ್ರಾಚಾರ್ಯ ಬಿ.ಬಸವರಾಜ ತಿಳಿಸಿದ್ದಾರೆ.
ಬಂಗಿಬಸಪ್ಪ ಪಿ.ಯು ಕಾಲೇಜು : ಪಟ್ಟಣದ ಬಂಗಿಬಸಪ್ಪ ಪಿ.ಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಒಟ್ಟು 218 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ ಉನ್ನತಶ್ರೇಣಿ -29, ಪ್ರಥಮ -116, ದ್ವಿತೀಯ -31, ತೃತೀಯ -2, ಹೀಗೆ ಒಟ್ಟು 178 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಚಾರ್ಯ ಅರುಣಕುಮಾರ ತಿಳಿಸಿದ್ದಾರೆ.
ನಿಸರ್ಗ ಪ.ಪೂ ಕಾಲೇಜು: ತಾಲೂಕಿನ ನಜೀರನಗರದ ನಿಸರ್ಗ ಪದವಿ ಪೂರ್ವ ಕಾಲೇಜಿನಲ್ಲಿ 53 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿ -3, ಪ್ರಥಮ -32, ದ್ವಿತೀಯ -9, ತೃತೀಯ -3 ಕಾಲೇಜಿನ ಒಟ್ಟು ಪಲಿತಾಂಶ 86.79 ಬಂದಿದೆ ಎಂದು ಪ್ರಾಚಾರ್ಯ ಕಲ್ಯಾಣದವರ್ ತಿಳಿಸಿದ್ದಾರೆ.
ಎಸ್‍ಯುಜೆಎಂ ಪಿಯು ಕಾಲೇಜು :
ಕಾಲೇಜಿನ ಕಲಾ ವಿಭಾಗದಲ್ಲಿ ಪಿ.ಅಕ್ಷತಾ ತಾಳೆದಹಳ್ಳಿ ಇವರು 600ಕ್ಕೆ 588 ಅಂಕ ಪಡೆದು ಕಾಲೇಜಿಗೆ ಪ್ರಥಮ ಬಂದಿದ್ದಾರೆ, ವಾಣಿಜ್ಯ ವಿಭಾಗದಲ್ಲಿ ಕೆ.ಎಂ.ಡಯಾನ ಒಟ್ಟು 600ಕ್ಕೆ 585 ಅಂಕ ಗಳಿಸಿದ್ದಾರೆ, ವಿಜ್ಞಾನ ವಿಭಾಗದಲ್ಲಿ ಕೆ.ಸ್ನೇಹ ಇವರು 600ಕ್ಕೆ 534 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಹೆಚ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.