ವಿಜ್ಞಾನಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ

ಬಾದಾಮಿ,ಮಾ12: ವಿಜ್ಞಾನಕ್ಕೆ ಭಾರತದ ಅನೇಕ ವಿಜ್ಞಾನಿಗಳು ನೀಡಿದ ಕೊಡುಗೆ ಅನನ್ಯವಾಗಿದೆ ಅಂತಹ ಮಹಾನ್ ವ್ಯಕ್ತಿಗಳಲ್ಲಿ ಸರ್ ಸಿವಿ ರಾಮನ್‍ರು ಒಬ್ಬರು ಎಂದು ವಿಜ್ಞಾನ ಶಿಕ್ಷಕ ಬಿ.ಟಿ.ಹಳ್ಳಿ ಹೇಳಿದರು.
ಅವರು ತಾಲೂಕಿನ ಕರಡಿಗುಡ್ಡ ಎಸ್.ಎನ್.ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಕಿನ ಚದುರುವಿಕೆಯ ಬಗ್ಗೆ ಅಧ್ಯಯನವನ್ನು ಮಾಡಿ ಭಾರತವನ್ನು ಜಾಗತಿಕವಾಗಿ ವೈಜ್ಞಾನಿಕವಾಗಿ ಗುರುತಿಸುವಲ್ಲಿ ಇವರ ಸಂಶೋಧನೆಯ ಪ್ರಮುಖ ಪಾತ್ರ ವಹಿಸಿದೆ ಪ್ರತಿದಿನವೂ ವಿಜ್ಞಾನವು ಬದಲಾವಣೆಯನ್ನು ಹೊಂದುತ್ತಿರುವ ಜಗತ್ತಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದಾಗಿದೆ ಸರ್ ಜಗದೀಶ್ ಚಂದ್ರ ಬೋಸ್, ಚಂದ್ರಶೇಖರ್, ಡಾ. ಎಪಿಜೆ ಅಬ್ದುಲ್ ಕಲಾಂ ಇನ್ನು ಮುಂತಾದ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಆರ್ಯಭಟನು ಖಗೋಳ ಶಾಸ್ತ್ರದಲ್ಲಿ ಪ್ರಥಮವಾಗಿ ಸೂರ್ಯ ಸಿದ್ಧಾಂತವನ್ನು ಮಂಡಿಸಿದ್ದ ದಿನನಿತ್ಯ ಜೀವನದಲ್ಲಿ ನಾವು ತರ್ಕ ಊಹೇಗಳನ್ನು ಮಾಡಿಕೊಂಡು ಅವುಗಳನ್ನು ಪರಿಹಾರಾತ್ಮಕವಾಗಿ ನೋಡಿಕೊಂಡಾಗ ಮಾತ್ರ ಇಂತಹ ವಿಜ್ಞಾನ ದಿನಾಚರಣೆ ಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಗೂಳಪ್ಪ ಮಣ್ಣೂರ ಉದ್ಘಾಟಕರಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾಜ ವಿಜ್ಞಾನದ ಶಿಕ್ಷಕ ಎಂ.ಜಿ.ಚೌದ್ರಿ ಮಾತನಾಡಿ ವಿಜ್ಞಾನದ ಅನೇಕ ಮೊದಲುಗಳು ಪ್ರತಿನಿತ್ಯದಲ್ಲಿ ನಮ್ಮೆದುರಿಗೆ ಇರುತ್ತವೆ. ಆಧುನಿಕ ಜಗತ್ತಿನೊಂದಿಗೆ ನಾವೆಲ್ಲರೂ ಹೊಂದಾಣಿಕೆಯಾಗಲು ಅವುಗಳನ್ನ ಸಂಶೋಧನೆಯೊಂದಿಗೆ ಜೊತೆ ಜೊತೆಯಲ್ಲೇ ಸಾಗ ಬೇಕಾಗಿರುವುದು ಇಂದಿನ ವಿದ್ಯಮಾನವಾಗಿದೆ ಎಂದರು. ಶಾಲೆಯ ಮುಖ್ಯೋಪಾಧ್ಯಾಯ ಉಜ್ವಲ ಬಸರಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕಿ ಅರ್.ಸಿ ಮರಿಗೌಡರ್ ಮಾತನಾಡಿ ಸ್ಥಳೀಯ ವೈಜ್ಞಾನಿಕ ಮನೋಭಾವನೆ ಮತ್ತು ತಾರ್ಕಿಕ ಚಿಂತನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ವಾಗಿದೆ. ದೇಶದ ಆಂತರಿಕ ಮತ್ತು ಜಾಗತಿಕ ಬೆಳವಣಿಗೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ. 2024ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಥೀಮ್ ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು. ಕೊರೋನಾ ಮಹಾಮಾರಿಗೆ ಲಸಿಕೆ ಕಂಡುಹಿಡಿದದ್ದು ಚಂದ್ರಯಾನ ಮೂರು ಯಶಸ್ವಿಯಾಗಿದ್ದು ಸ್ವದೇಶ ನಿರ್ಮಿತ ಯುದ್ಧ ನೌಕೆಗಳನ್ನು ಮತ್ತು ಯುದ್ಧವಿಮಾನಗಳನ್ನು ನಿರ್ಮಿಸಿದ್ದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರತಿಫಲವೇ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೇರೆಬೇರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಂಗೋಲಿಯಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸುವುದು ಮತ್ತು ವಿಜ್ಞಾನದ ಸರಳ ಮಾದರಿಗಳ ತಯಾರಿಕೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕರು ಭಾಗವಹಿದ್ದರು. ಸೋಮಲಿಂಗ ಕಮಲದಿನ್ನಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪೃಥ್ವಿ ಸೂಡಿ ನಿರೂಪಿಸಿದಳು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅಕ್ಷತಾ ಕಂಕನವಾಡಿ ವಂದಿಸಿದರು.