ವಿಜೇತರಿಗೆ ಬಹುಮಾನ ವಿತರಣೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.21: ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕೊನೆಯ ದಿನ ಹಾಗೂ ಸಪ್ತಹದ ನಿಮಿತ್ಯ ಆಯೋಜನೆ ಮಾಡಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಕೋಟೆ ಮುಖ್ಯಗುರು ಸಾದಕಲಿ ಹಾಗೂ ಸ.ಮಾ.ಹಿ.ಪ್ರಾ. ಪಿಕೇ.ರಿ ಶಾಲೆಯ ಚಿತ್ರಕಲೆ ಶಿಕ್ಷಕಿ ರೇಖಾ ಹಾಗೂ ಗ್ರಂಥಾಲಯ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು ಮತ್ತು ಸ್ಪರ್ಧಾಳಿಗಳಿಗೆ ಪ್ರಥಮ ಬಂಧ ವಿದ್ಯಾರ್ಥಿಗಳಿಗೆ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಬಹುಮಾನ ಕೊಡುಗೆಯನ್ನು ನೀಡಲಾಗಿತ್ತು.