ವಿಜೃಂಭಿಸಿದ ಕೋಟೆಗುಡ್ಡ ಮಾರೆಮ್ಮನ ಜಾತ್ರೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 18 :-  ತಾಲೂಕಿನ ಅಪ್ಪೇನಹಳ್ಳಿ ತಾಂಡಾ ಬಳಿಯ ಕೋಟೆಗುಡ್ಡ ಮಾರಮ್ಮ ದೇವಿ ಜಾತ್ರೆಯು ಮಂಗಳವಾರ ಭಕ್ತ ಸಾಗರದ ಮಧ್ಯೆ ಮಂಗಳವಾರ ಬಲು ವಿಜೃಂಭಣೆಯಿಂದ ಜರುಗಿತು.
ತಾಲೂಕಿನ ಗುಡೇಕೋಟೆ ಹೋಬಳಿಯ ಅಪ್ಪೇನಹಳ್ಳಿ ತಾಂಡಾ  ಸಮೀಪದ ಗುಡ್ಡದಲ್ಲಿರುವ ಕೋಟೆಗುಡ್ಡ ಮಾರಮ್ಮ ದೇವಿಯ ಪೂಜಾ ವಿಧಿ, ವಿಧಾನಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು. ಈ ಜಾತ್ರೆಯು ಪ್ರತಿವರ್ಷ ಐದು ವಾರಗಳ ಕಾಲ ಕೋಟೆ ಗುಡ್ಡದಲ್ಲಿ ನಡೆಯುವುದು ಇಲ್ಲಿನ ವಿಶೇಷ. ಇಲ್ಲಿಗೆ ರಾಜ್ಯದ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿ ನೆರೆಯ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು ಆಗಮಿಸಿ ಪೂಜೆ, ಹರಕೆ ಸಲ್ಲಿಸುತ್ತಾರೆ.
 ಗುಡೇಕೋಟೆ ಪೊಲೀಸರಿಂದ ಬಿಗಿ ಭದ್ರತೆಯಲ್ಲಿ ಜಾತ್ರಾ ಸಮಯದಲ್ಲಿ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದವಾಗದಂತೆ ಬಿಗಿ ಭದ್ರತೆ ಒದಗಿಸಿದ್ದರು ಭಕ್ತರು  ಗುಡ್ಡ ಹತ್ತಿ ದೇವಿಗೆ ಪೂಜೆ ಸಲ್ಲಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆಸಿದರು.